logo
WhatsApp Image 2026-04-02 at 14.46.04.jpeg
hindalco everlast.jpeg

ಕನ್ನಡಾಭಿಮಾನಿಯ ವಿಶಿಷ್ಟ ರಾಜ್ಯೋತ್ಸವ ಆಚರಣೆ

ಟ್ರೆಂಡಿಂಗ್
share whatsappshare facebookshare telegram
2 Nov 2022
post image

ಉಡುಪಿ: ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ .ಅದರೆ ಉಡುಪಿಯ ಕನ್ನಡಾಭಿಮಾನಿಯೊಬ್ಬರು ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವ ವನ್ನು ಅಚರಿಸಿದ್ದಾರೆ . ಅವರ ಹೆಸರು ಮೊಹಮ್ಮದ್ ಇನ್ತಿಯಾಜ್ ಉಡುಪಿ ತಾಲೂಕಿನ ಕೆಮ್ಮಣ್ಣು ಗ್ರಾಮದವರು . ಉಡುಪಿಯಲ್ಲಿ ಕೆಮ್ಮಣ್ಣು ತೂಗು ಸೇತುವೆ ನೋಡಲು ಬರುವ ಪ್ರವಾಸಿಗರಿಗೆ ಉಚಿತ ಸಾಹಿತ್ಯಿಕ ಪುಸ್ತಕ ಹಾಗು ಪ್ರವಾಸಿಗರಿಗೆ ಉಚಿತ ದೋಣಿ ವಿಹಾರ ಕಲ್ಪಿಸುವ ಮೂಲಕ ರಾಜ್ಯೋತ್ಸವವನ್ನು ಅಚರಿಸಿದ್ದಾರೆ .

ಇನ್ತಿಯಾಜ್ ಅವರಿಗೆ ಸಾಹಿತ್ಯ ದಲ್ಲಿ ಅತೀವ ಅಸಕ್ತಿ ,ಜೊತೆಗೆ ಓದುಗರು ಹೌದು . ಅವರು ಬೇಂದ್ರೆ ಕುವೆಂಪು, ಜವಹರಲಾಲ್ ನೆಹರು,ಗಾಂಧೀಜಿ ಸೇರಿದಂತೆ ಅನೇಕ ವಿಜ್ಞಾನಿಗಳ ಜೀವನಚರಿತ್ರೆ ಪುಸ್ತಕ ಗಳನ್ನು ಖರಿದಿಸಿ ಪ್ರವಾಸಿಗರಿಗೆ ವಿತರಿಸಿದ್ದಾರೆ .ಇಷ್ಟೇ ಮಾತ್ರವಲ್ಲ ದೆ ಕೆಮ್ಮಣ್ಣು ತೂಗುಸೇತುವೆ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ವಾಟರ್ ಎಡ್ವೆಂಚರ್ಸ್ ಕೆಮ್ಮಣ್ಣು ಸಣ್ಣ ಸಂಸ್ಥೆ ಹುಟ್ಟುಹಾಕಿ ಅದರ ಮೂಲಕ ಉಚಿತ ಸುವರ್ಣನದಿ ದರ್ಶನವನ್ನು ಕಲ್ಪಿಸಿದ್ದಾರೆ .

ಅಪತ್ಬಾಂದವನಾಗಿದ್ದ ಇನ್ತಿಯಾಜ್ : ಉಡುಪಿಯಲ್ಲಿ 2020 ರಲ್ಲಿ ಭಾರಿ ಮಳೆಯಿಂದ ಸುವರ್ಣ ನದಿ ಪ್ರವಾಹದ ಸಂದರ್ಭದಲ್ಲಿ ಇನ್ತಿಯಾಜ್ , ಇಲ್ಯಾಸ್ ಸುಹೇಲ್ ,ಮೂವರು ಅಣ್ಣತಮ್ಮಂದಿರು ಸೇರಿಕೊಂಡು ಪ್ರವಾಹದಲ್ಲಿ ಸಿಲುಕಿಕೊಂಡ 242 ಕುಟುಂಬದವರನ್ನು ತಮ್ಮ ಕಯಾಕಿಂಗ್ ಬೋಟುಗಳಲ್ಲಿ ರಕ್ಷಿಸಿದ್ದರು. ಅಂದಿನ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ಕಾರ್ಯವನ್ನು ಶ್ಲಾಘಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದರು .

ನಮ್ಮ ನಾಡಿನ ಸಂಸ್ಕೃತಿ ಯ ಆಚರಣೆ ಗೆ ಹೆಚ್ಚಿನ ಮಹತ್ವ ವಿದೆ .ಅದಕ್ಕಾಗಿ ಈ ಬಾರಿ ಬಲು ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಯೋಚಿಸಿದ್ದು ಶ್ರೇಷ್ಠ ವಿಜ್ಞಾನಿಗಳು ,ಸಾಧಕರ ಜೀವನ ಚರಿತ್ರೆಯ ಪುಸ್ತಕಗಳನ್ನು ವಿತರಿಸುವ ಮೂಲಕ ಎಲ್ಲರಿಗೂ ಕನ್ನಡ ಜ್ಞಾನ ಪಸರಿಸಬೇಕೆಂಬುದು ನನ್ನ ಪ್ರಯತ್ನ . ಮಹಮ್ಮದ್ ಇನ್ತಿಯಾಜ್ ಕೆಮ್ಮಣ್ಣು

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.