



ಕಾಲೇಜುಗಳಲ್ಲಿ ಈ ವರುಷ ನೂತನ ರಾಷ್ಟಿ,ಯ ಶಿಕ್ಷಣ ಪದ್ಧತಿ ಜಾರಿಗೆ ಬರುತ್ತಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗ ಪಡಿಸಿಕೊಂಡರೆ ವ್ಯಕ್ತಿತ್ವದ ವಿಕಾಸದೊಂದಿಗೆ ಜ್ಞಾನವಿಸ್ತಾರ ಆಗುವುದರಲ್ಲಿ ಸಂಶಯವಿಲ್ಲ. ನಮ್ಮ ಕಾಲೇಜಿನಲ್ಲಿ ಪೂರಕ ವಾತಾವರಣವೂ, ಸೌಲಭ್ಯವೂ ಹೇರಳವಾಗಿರುವುದರಿಂದ ಸಂಪೂರ್ಣ ಸದುಪಯೋಗ ಆಗಬೇಕು. ವಿದ್ಯಾರ್ಥಿ ತನ್ನ ಸ್ವಂತ ಪರಿಶ್ರಮದಿಂದ ಜ್ಞಾನ ವಿಸ್ತರಣೆ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಎಲ್ಲವನ್ನೂ ಅಧ್ಯಾಪಕರಿಂದಲೇ ಪಡೆದುಕೊಳ್ಳಬಲ್ಲುದು ಎಂಬುದು ಪೂರ್ಣಸತ್ಯವಲ್ಲ . ಅದರಿಂದಾಗಿ ನಾವು ಬೆಳೆಯುವುದು ಕೇವಲ ಕಾಲುಭಾಗ ಮಾತ್ರ. ಉಳಿದುದನ್ನು ನಾವು ಗಳಿಸಬೇಕಾದುದು ನಮ್ಮ ಶೈಕ್ಷಣಿಕ ಬದುಕಿನ ಆದ್ಯತೆಯಾಗಬೇಕು’ ಎಂದು ಕಾಲೇಜಿನ ಆಡಳಿತಮಂಡಳಿಯ ಅಧ್ಯಕ್ಷರಾದ ಸಿ. ಎ. ಶಿವಾನಂದ ಪೈಯವರು ಮೊದಲ ವರುಷದ ಪದವಿ ತರಗತಿಗಳಿಗೆ ಸೇರ್ಪಡೆಯಾಗಿರುವ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಎ. ಕೋಟ್ಯಾನ್ ಅವರು ವಹಿಸಿಕೊಂಡು ಕಾಲೇಜಿನ ಸಂಪನ್ಮೂಲತೆ ಮತ್ತು ಬಳಕೆಯ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ದತ್ತಾತ್ರೇಯ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಕು. ಭೂಮಿಕಾ ಪ್ರಾರ್ಥಿಸಿದರು. ಡಾ. ವಿಜಯಕುಮಾರಿ ಸ್ವಾಗತಿಸಿ, ಡಾ. ಅರುಣಕುಮಾರ್ ಎಸ್. ಆರ್ ಅವರು ವಂದಿಸಿದರು. ಉಪನ್ಯಾಸಕಿ ಕು. ರಮಿತಾ ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ತದನಂತರ ನಡೆದ ಮಾಹಿತಿ ಶಿಬಿರವನ್ನು ಪ್ರೊ. ದತ್ತಾತ್ರೇಯ ಮಾರ್ಪಳ್ಳಿ ನಡೆಸಿಕೊಟ್ಟರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.