



ಉಡುಪಿ; ಉಡುಪಿ ಕರಾವಳಿ ಬೈಪಾಸ್ ಬಳಿಯ ವಸತಿ ಸಮುಚ್ಛಯವೊಂದಕ್ಕೆ ನುಗ್ಗಿದ ಯುವಕನೋರ್ವ ಅಲ್ಲಿನ ಗೇಟು, ಇಂಟರ್‌ಲಾಕ್‌ಗಳನ್ನು ಕಿತ್ತೆಸೆದು ಭಯದ ವಾತಾವರಣ ಸೃಷ್ಟಿಸಿ, ಸಾವಿರಾರು ರೂ. ನಷ್ಟವನ್ನುಂಟು ಮಾಡಿದ ಘಟನೆ ಇಂದು ನಡೆದಿದೆ. ಹಾವೇರಿ ಮೂಲದ 24ವರ್ಷದ ಬಶೀರ್ ಧಾಂದಲೆ ನಡೆಸಿದ ಯುವಕ. ಈತ ಇಂದು ಕರಾವಳಿ ಬೈಪಾಸ್ ಬಳಿಯ ವಸತಿ ಸಮುಚ್ಛಯಕ್ಕೆ ನುಗ್ಗಿ ಜೋರಾಗಿ ಕೂಗಾಟ ನಡೆಸಿದ್ದಾನೆ. ಬಳಿಕ ಮುಖ್ಯದ್ವಾರದ ಕಬ್ಬಿಣದ ಗೇಟನ್ನು ಎತ್ತಿ ಎಸೆದಿದ್ದಾನೆ. ಅಂಗಳದ ಇಂಟರ್‌ಲಾಕ್, ಟೈಲ್ಸ್ ಗಳನ್ನು ಪುಡಿಗಟ್ಟಿದ್ದಾನೆ. ಯುವಕನ ಬೊಬ್ಬೆ, ರೌದ್ರಾವತಾರಕ್ಕೆ ಬೆದರಿದ ಕಟ್ಟಡದ ನಿವಾಸಿಗಳು ಮನೆಯಿಂದ ಹೊರಗೆ ಬಾರದೆ ಮೂಕ ಪ್ರೇಕ್ಷಕರಾಗಿದ್ದರು. ಯುವಕನ ರಂಪಾಟ ವಿಕೋಪಕ್ಕೆ ತಿರುಗಿದಾಗ ನಿವಾಸಿಯೊಬ್ಬರು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಗೆ ಮಾಹಿತಿ ನೀಡಿದ್ದು, ಅದರಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು, ಯುವಕನನ್ನು ವಶಕ್ಕೆ ಪಡೆದು ಸಮಾಧಾನಪಡಿಸಿದರು. ಬಳಿಕ ಆತನನ್ನು ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದರು. ಪ್ರಕರಣದ ಬಗ್ಗೆ ನಗರ ಠಾಣೆಗೆ ಮಾಹಿತಿ ನೀಡಲಾಗಿದ್ದು, ಸಂಬಂಧಿಕರು ಯಾರಾದರೂ ಇದ್ದರೆ ಬಾಳಿಗಾ ಆಸ್ಪತ್ರೆ ಅಥವಾ ನಗರ ಠಾಣೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.