



ಮಂಗಳೂರು: ಡ್ರಗ್ ಅಡಿಕ್ಟ್ ಹೆಸರಲ್ಲಿ ಮಾನಸಿಕ ಸಮಸ್ಯೆಯಲ್ಲಿ ಬಳಲುತ್ತಿರುವ ಯುವತಿಯೊಬ್ಬಳು ಕದ್ರಿ ಠಾಣೆಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸುವ ವಿಡಿಯೋ ವೈರಲ್ ಆಗಿದೆ. ಸೆ.1 ರಂದು ಕದ್ರಿ ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬಳನ್ನು ನಾಲ್ಕೈದು ಮಹಿಳಾ ಪೊಲೀಸ್ ಸಿಬ್ಬಂದಿ ನಿಯಂತ್ರಿಸುತ್ತಿರುವಾಗ ಯುವತಿಯು ಪೊಲೀಸ್ ಸಿಬ್ಬಂದಿಗೆ ತುಳಿದು ಹಲ್ಲೆಗೆ ಯತ್ನಿಸುತ್ತಾರೆ. ಈ ವೇಳೆ ಯುವತಿಯನ್ನು ನಿಯಂತ್ರಿಸಲು ಪೊಲೀಸರು ಯುವತಿಯ ಕೈಗೆ ಕೋಳ ತೊಡಿಸುವ ದೃಶ್ಯ ಸೆರೆಯಾಗಿದೆ. ಘಟನೆ ಬಳಿಕ ವೀಡಿಯೋ ಬಗ್ಗೆ ಪೋಲಿಸ್ ಕಮಿಷನರ್ ಅನುಪಮ್ ಅಗರ್ವಾಲ್ ಸ್ಪಷ್ಡನೆ ನೀಡಿದ್ದಾರೆ. ಸೆ.೧ ರಂದು ಪಂಪ್‌ವೆಲ್ ನಲ್ಲಿ ಅಸಾಮಾನ್ಯವಾಗಿ ವರ್ತಿಸುವ ಯುವತಿ ನಡೆಯನ್ನು ಗಮನಿಸಿದ ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಮಾದಕ ದ್ರವ್ಯ ಸೇವನೆ ಅನುಮಾನ ವ್ಯಕ್ತಪಡಿಸಿ ಆಕೆಯನ್ನು ವೈದಕೀಯ ತಪಾಸಣೆಗೆ ಕರೆದುಕೊಂಡು ಹೊಗಲು ಪ್ರಯತ್ನಿಸಿದಾಗ ಹಲ್ಲೆಗೆ ಯತ್ನಿಸಿದ್ದಾಳೆ.
ಮಹಿಳಾ ಸಿಬ್ಬಂದಿ ಬಲದೊಂದಿಗೆ ವೈದಕೀಯ ತಪಾಸಣೆ ನಡೆಸಲಾಗಿದೆ. ಆದರೆ ವೈದಕೀಯ ತಪಾಸಣೆಯಲ್ಲಿ ಮಾದಕ ದ್ರವ್ಯ ಪರೀಕ್ಷೆ ನೆಗೆಟಿವ್ ಬಂದಿದೆ. ನಂತರ ಆಕೆಯನ್ನು ಆಕೆಯ ಹೆತ್ತವರ ವಶಕ್ಕೆ ವಹಿಸಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಆಕೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ದೊರಕಿದೆ ಎಂದು ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.