logo
WhatsApp Image 2026-04-02 at 14.46.04.jpeg
hindalco everlast.jpeg

ಎ.12: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮನ್ಮಹಾರಥೋತ್ಸವ

ಟ್ರೆಂಡಿಂಗ್
share whatsappshare facebookshare telegram
11 Apr 2023
post image

ಸಿದ್ದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಎ. 9 ರಿಂದ ವರ್ಷಾವಧಿ ಉತ್ಸವ ಮೊದಲ್ಗೊಂಡು ಎ. 14ರ ತನಕ ವಿವಿಧ ವಿಧಿ ವಿಧಾನಗಳ ಮೂಲಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎ.12ರಂದು ದೇಗುಲದಲ್ಲಿ ಶ್ರೀ ಮನ್ಮಹಾರಥೋತ್ಸವ ಜರಗಲಿದೆ.

ಧಾರ್ಮಿಕ ಕಾರ್ಯಕ್ರಮಗಳು: ಶ್ರೀ ಮನ್ಮಹಾರಥೋತ್ಸವ ಅಂಗವಾಗಿ ಎ. 10 ರಂದು ಸಿಂಹವಾಹನೋತ್ಸವ, ಎ. 11 ರಂದು ಪುಷ್ಪಕವಾಹನೋತ್ಸವ, ಎ. 12 ರಂದು ಶ್ರೀ ಮನ್ಮಹಾರಥೋತ್ಸವ. ಎ. 13 ರಂದು ಚೂರ್ಣೋತ್ಸವ ಹಾಗೂ ತುಲಾಭಾರ ಸೇವೆ, ಎ. 14 ರಂದು ಅವಭೃತ, ಮೃಗಯಾ ವಿಹಾರ, ಪೂರ್ಣಾಹುತಿ, ಧ್ವಜಾರೋಹಣ, ಕುಂಭಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ.

ಎ. 13 ರಂದು ನಡೆಯುವ ತುಲಾಭಾರ ಸೇವೆ ಮಾಡಲಿಚ್ಚಿಸುವವರು ಎ. 12ರ ಸಂಜೆ ಒಳಗೆ ತಿಳಿಸಬೇಕು. ಭಕ್ತರಿಗೆ ಮಧ್ಯಾಹ್ನದ ಊಟ ಮತ್ತು ರಾತ್ರಿಯ ವಸತಿ ವ್ಯವಸ್ಥೆ ಇದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ತಿಳಿಸಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.