



ನವದೆಹಲಿ: 2025ರ ಅಕ್ಟೋಬರ್ 1ರ ಬಳಿಕ ನಿರ್ಮಾಣವಾಗುವ ಎಲ್ಲಾ ಹೊಸ ಟ್ರಕ್ ಗಳಲ್ಲಿ ಚಾಲಕರಿಗೆ ಹವಾನಿಯಂತ್ರಣ ಕ್ಯಾಬಿನ್ ಗಳನ್ನು ಕಡ್ಡಾಯ ಮಾಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಅಕ್ಟೋಬರ್ 1, 2025 ರಂದು ಅಥವಾ ನಂತರ ತಯಾರಿಸಿದ ಎಲ್ಲಾ ವಾಹನಗಳಿಗೆ ಎನ್ 2 ಮತ್ತು ಎನ್ 3 ವರ್ಗದ ಕ್ಯಾಬಿನ್ ಗೆ ಹವಾನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಹೇಳಿದೆ.
ಈ ಹಿಂದೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಾರಿಗೆ ಸಚಿವ ನಿತಿನ್ ಗಡ್ಕರಿ, ಹಿತದೃಷ್ಟಿಯಿಂದ ಎಸಿ ಕ್ಯಾಬಿನ್ ಕಡ್ಡಾಯಗೊಳಿಸಲಾಗುತ್ತದೆ. ಟ್ರಕ್ ಡ್ರೈವರ್ ಕಂಪಾರ್ಟ್ ಮೆಂಟ್ ಗಳಲ್ಲಿ ಹವಾನಿಯಂತ್ರಿತ ಕಡ್ಡಾಯಗೊಳಿಸುವ ಕಡತಕ್ಕೆ ಸಹಿ ಹಾಕಿದ್ದೇನೆ. ಟ್ರಕ್ ಗಳನ್ನು ಓಡಿಸುವ ಚಾಲಕರು ಈ ಕ್ರಮವನ್ನು ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.