



ಹೆಬ್ರಿ : ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿ ಹಿಂದಿನಿಂದ ಬರುತ್ತಿದ್ದ ಲಾರಿಯಡಿ ಬಿದ್ದು ಸಾವನಪ್ಪಿದ ಘಟನೆ ಹೆಬ್ರಿ ವರಂಗ ಸಮೀಪ ನಡೆದಿದೆ. ಸವಾರಸಾಗರ ತಾಲೂಕಿನ ಸಿರದಂಗೂರು ಗ್ರಾಮದ ನಿವಾಸಿಯಾಗಿರುವ ಜಿನದತ್ತ ಜೈನ್ (42) ಎಂದು ಗುರುತಿಸಲಾಗಿದೆ. ಸವಾರ ಕಾರ್ಕಳ ಅಗುಂಬೆ ಮಾರ್ಗವಾಗಿ ಸಾಗರದತ್ತ ಹೋಗುವ ಸಂದರ್ಭದಲ್ಲಿ ಓವರ್ ಟೇಕ್ ಭರದಲ್ಲಿ ಈ ಘಟನೆ ನಡೆದಿದೆ. ವರಂಗ ಕೆಲ್ ಟೆಕ್ ರಸ್ತೆ ತಿರುವಿನಲ್ಲಿಯೇ ಈ ಘಟನೆ ನಡೆದಿದ್ದು ಈ ಅಪಘಾತ ವಲಯವಾಗಿದ್ದು ಅನೇಕ ಅಪಘಾತಗಳು ಸಂಭವಿಸುತ್ತಿವೆ.ರಸ್ತೆಯಲ್ಲಿ ಸೂಚನ ಫಲಕ ಅಳವಡಿಸಬೇಕೆಂದು ಜನರು ಪಟ್ಟು ಹಿಡಿದಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.