logo
WhatsApp Image 2026-04-02 at 14.46.04.jpeg
hindalco everlast.jpeg

ಧರ್ಮದ ನಡೆಯಲ್ಲಿ ನಡೆಯುವ ಕೆಲಸಗಳು ಸಾರ್ಥಕಗೊಳ್ಳುತ್ತವೆ : ದಯಾನಂದ ಕತ್ತಲ್

ಟ್ರೆಂಡಿಂಗ್
share whatsappshare facebookshare telegram
30 Nov 2025
post image

ಕಾರ್ಕಳ: ಕಾರ್ಕಳ ತಾಲೂಕಿನ ಅಜೆಕಾರು ಮಂಗಲಾನಗರ ಗೋಳಿಪಲ್ಕೆಯಲ್ಲಿ ನಡೆದ ಮಾಹಮ್ಮಾಯಿ ಬೊಬ್ಬರ್ಯ ನೀಚ ಮತ್ತು ವ್ಯಾಘ್ರ ಚಾಮುಂಡಿ ದೇವಸ್ಥಾನದ ಧಾರ್ಮಿಕ ಸಭಾಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ದಯಾನಂದ ಕತ್ತಲ್ ಸರ್, “ಧರ್ಮದ ನಡೆಯಲ್ಲಿ ನಡೆಯುವ ಕೆಲಸಗಳು ಸದಾ ಸಾರ್ಥಕಗೊಳ್ಳುತ್ತವೆ” ಎಂದು ಹೇಳಿದರು. ತುಳುನಾಡಿನ ಸಂಸ್ಕೃತಿಗಳು ಸುಂದರವಾಗಿದ್ದು, ಸಾಮರಸ್ಯಕ್ಕೆ ಪೂರಕವಾಗಿವೆ. ಹಿರಿಯರ ಮಾರ್ಗದರ್ಶನ ಪಾಲಿಸಿ, ದೈವಗಳ ಸೇವೆ ಮಾಡುವವರು ಶ್ರದ್ಧೆಯಿಂದ, ನಿಯಮ–ನಿಷ್ಠೆಯಿಂದ ನಡೆಯಬೇಕು. ದುರುಚಿತಗಳನ್ನು ರೂಢಿಸಿಕೊಳ್ಳದೇ, ಪ್ರಾಮಾಣಿಕತೆ, ಶುದ್ಧತೆ, ಶಿಸ್ತಿಗೆ ಪ್ರಾಮುಖ್ಯತೆ ನೀಡಬೇಕು. ಅನ್ನದಾನ, ವಿದ್ಯಾದಾನಗಳಿಗೆ ಹೆಚ್ಚಿನ ಪ್ರತಿಷ್ಠೆ ನೀಡಬೇಕು ಎಂದು ಅವರು ಸಲಹೆ ನೀಡಿದರು. ಪ್ರಧಾನ ಅರ್ಚಕ ಶ್ರೀಕಾಂತ್ ಭಟ್ ಮಾತನಾಡಿ, “ಒಗ್ಗಟ್ಟಿನಲ್ಲಿ ಬಲವಿದೆ. ಗ್ರಾಮದ ಸಹಬಾಳ್ವೆಯಿಂದ ಪುಣ್ಯಕಾರ್ಯಗಳು ನೆರವೇರುತ್ತವೆ. ಸಂಪ್ರದಾಯ ಹಾಗೂ ಆಚರಣೆಗಳಿಂದ ಸುಭಿಕ್ಷತೆ ಹೆಚ್ಚುತ್ತದೆ. ಊರಿನ ಅಭಿವೃದ್ದಿಯಲ್ಲಿ ಗ್ರಾಮಸ್ಥರ ಪಾತ್ರ ಅತ್ಯಂತ ಮುಖ್ಯ” ಎಂದು ಹೇಳಿದರು. ಪಂ. ಸದಸ್ಯರಾದ ರಾಜೇಶ್ ಶೆಟ್ಟಿ, ಕೃಷ್ಣಮೂರ್ತಿ ಹಾಗೂ ಉದ್ಯಮಿಗಳು ನಂದಕುಮಾರ್ ಹೆಗ್ಡೆ, ಜಗದೀಶ್ ಶೆಟ್ಟಿ, ವೆಂಕಟ್ ಭಟ್, ವಿಶ್ವನಾಥ ಪೈ, ರಾಮಕೃಷ್ಣ ಶೆಟ್ಟಿ, ಸುಧಾಕರ ನಾಯ್ಕ್, ಮಹಾನಂದ ಶೆಟ್ಟಿ, ಟಿ. ಮಂಜುನಾಥ್, ಸತೀಶ್ ಸೇವ್‌ಗಾರ್, ಪ್ರದೀಪ್ ದಾಸ್ ಗದ್ದೆ, ಜನಾರ್ಧನ ನಾಯಕ್, ಭೋಜ ಶೆಟ್ಟಿ, ಪ್ರದೀಪ್ ಹೆಗ್ಡೆ, ಸತೀಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಕುಂಠಿನಿ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸ್ಥಳದ ದಾನಿ ಲಲಿತ ಹೆಗ್ಡೆ, ದೈವದ ಮಧ್ಯಸ್ಥ ಪ್ರದೀಪ್ ಹೆಗ್ಡೆ ಹಾಗೂ ಸ್ವಯಂಸೇವಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸುನೀಲ್ ಹೆಗ್ಡೆ ಸ್ವಾಗತಿಸಿದರು. ಸತೀಶ್ ಹೊಸ್ಮಾರು ಕಾರ್ಯಕ್ರಮವನ್ನು ನಿರೂಪಿಸಿದರು. ..

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.