logo
WhatsApp Image 2026-04-02 at 14.46.04.jpeg
hindalco everlast.jpeg

ಹೋಟೆಲ್ ಕೊಠಡಿಯಲ್ಲಿ ನಟಿ ಆಕಾಂಕ್ಷಾ ಶವ ಪತ್ತೆ: ಆತ್ಮಹತ್ಯೆ ಶಂಕೆ

ಟ್ರೆಂಡಿಂಗ್
share whatsappshare facebookshare telegram
26 Mar 2023
post image

ಭೋಜ್‌ಪುರಿ ಚಿತ್ರರಂಗದ ಡ್ರೀಮ್ ಗರ್ಲ್ ಖ್ಯಾತಿಯ ನಟಿ ಆಕಾಂಕ್ಷಾ ದುಬೆ (Akanksha Dubey) ವಾರಾಣಸಿ ಹೋಟೆಲೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ್ಮಹತ್ಯೆ ಇರಬಹುದೆಂದು ಶಂಕಿಸಿದ್ದಾರೆ.

ವಾರಾಣಸಿಯ ಹೋಟೆಲ್ ಕೊಠಡಿಯಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಾರಾಣಸಿಯ ಸಾರನಾಥ ಪ್ರದೇಶದ ಹೋಟೆಲ್‌ವೊಂದರ ಕೋಣೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಆಕಾಂಕ್ಷಾ ಚಿತ್ರದ ಶೂಟಿಂಗ್‌ಗಾಗಿ ವಾರಾಣಸಿಗೆ ಬಂದಿದ್ದರು. ಘಟನೆಯ ಬಗ್ಗೆ ಪೊಲೀಸರು ನಟಿಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಆಕಾಂಕ್ಷಾ ದುಬೆ ಅವರನ್ನು ಭೋಜ್‌ಪುರಿ ಚಿತ್ರರಂಗದ ‘ಡ್ರೀಮ್ ಗರ್ಲ್’ ಎಂದೇ ಕರೆಯಲಾಗುತ್ತಿತ್ತು. ಆಕಾಂಕ್ಷಾ ಅವರ ಪೋಷಕರು ಪುತ್ರಿ ಐಪಿಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಆದರೆ ಆಕಾಂಕ್ಷಾ ಬೆಳ್ಳಿತೆರೆಯಲ್ಲಿ ತಮ್ಮ ವೃತ್ತಿಜೀವನ ಕಂಡುಕೊಂಡಿದ್ದರು.

ನಟಿ ಆಕಾಂಕ್ಷಾ ದುಬೆ 1997ರ ಅಕ್ಟೋಬರ್ 21ರಂದು ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಜನಿಸಿದ್ದರು. ಬಾಲ್ಯದಿಂದಲೂ ನೃತ್ಯ ಮತ್ತು ನಟನೆಯನ್ನು ಇಷ್ಟಪಡುತ್ತಿದ್ದರು. ತಮ್ಮ ನೃತ್ಯ ಮತ್ತು ನಟನೆಯ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಜನಪ್ರಿಯರಾಗಿದ್ದರು.

ಶನಿವಾರ ರಾತ್ರಿಯೂ ಸಹ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.

ಒಂದು ತಿಂಗಳ ಹಿಂದೆ ಪ್ರೇಮಿಗಳ ದಿನದಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದರು. ಇನ್ಸ್ಟಾ ಪೇಜ್ನಲ್ಲಿ ಸಹ ನಟ ಸಮರ್ ಸಿಂಗ್ ಜತೆಗಿನ ಫೋಟೋಗಳನ್ನು ನಟಿ ಹಂಚಿಕೊಂಡಿದ್ದರು. ಜತೆಗೆ ‘ಪ್ರೇಮಿಗಳ ದಿನದ ಶುಭಾಶಯಗಳು’ ಎಂದು ಬರೆದಿದ್ದರು. ಈ ಪ್ರೀತಿಯೇ ಸಾವಿಗೆ ಕಾರಣವಾಗಿರಬಹುದಾ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಬೇಕಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.