logo
WhatsApp Image 2026-04-02 at 14.46.04.jpeg
hindalco everlast.jpeg

ಸೋಮಾರಿ ಎಂದುದಕ್ಕೆ ಕ್ಷಮೆ ಕೋರಿದ ನಟಿ ಸೋನಾಕ್ಷಿ ಕುಲಕರ್ಣಿ

ಟ್ರೆಂಡಿಂಗ್
share whatsappshare facebookshare telegram
20 Mar 2023
post image

ನವದೆಹಲಿ: ಭಾರತೀಯ ಮಹಿಳೆಯರು ಸೋಮಾರಿಗಳು, ಎಲ್ಲದಕ್ಕೂ ಗಂಡ ಅಥವಾ ಪ್ರಿಯಕರನನ್ನು ಅವಲಂಬಿಸಿರುತ್ತಾರೆ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಸೋನಾಕ್ಷಿ ಕುಲಕರ್ಣಿ,ದೇಶದ ಮಹಿಳೆಯರ ಬಳಿ ಬೇಷರತ್‌ ಕ್ಷಮೆಯಾಚಿಸಿದ್ದಾರೆ.

ಅಲ್ಲದೇ, ಇದು ಯಾರನ್ನೂ ನೋಯಿಸಲು ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆಯಲ್ಲ ಎಂದು ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, “ಭಾರತದಲ್ಲಿ ಹಲವಾರು ಮಹಿಳೆಯರು ಸೋಮಾರಿಗಳಾಗಿರುತ್ತಾರೆ ಎನ್ನುವುದನ್ನು ನಾವು ಗಮನಿಸಿಯೇ ಇರುವುದಿಲ್ಲ. ಹೆಚ್ಚಿಗೆ ಸಂಪಾದಿಸುವ ಗಂಡ, ಪ್ರಿಯಕರ, ಮನೆ, ಕಾರು ಹೀಗೆ ಅಗತ್ಯವನ್ನೆಲ್ಲ ಅವರಿಂದಲೇ ಬಯಸುತ್ತಾ, ನಾವು ನಮಗಾಗಿ ದುಡಿಯುವುದನ್ನು ಸ್ವಾವಲಂಭಿಯಾಗಿ ಬದುಕುವುದನ್ನು ಮರೆತು ಬಿಟ್ಟಿರುತ್ತಾರೆ. ಮಹಿಳೆಯರನ್ನು ಸ್ವಾವಲಂಭಿಯಾಗಿಸಲು ಪ್ರೋತ್ಸಾಹಿಸಿ’ಎಂದಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.