



ನವದೆಹಲಿ: ಏಪ್ರಿಲ್ 1ರಿಂದ ಯುಪಿಐ ವಹಿವಾಟುಗಳಿಗೆ ಬಳಸುವ ಪ್ರಿಪೇಯ್ಡ್ ವ್ಯಾಲೆಟ್‌ಗಳಿಗೆ ಇಂಟರ್ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಹೇಳಿದೆ.
ವಹಿವಾಟು ಮೊತ್ತ 2,000 ರೂ.ಗಿಂತ ಹೆಚ್ಚಿದ್ದರೆ ಶೇ. 1.1ರಷ್ಟು ಶುಲ್ಕ ವಿಧಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.ಯುಪಿಐ ವಹಿವಾಟುಗಳ ಮೇಲೆ ಬಿತ್ತು ಕೇಂದ್ರ ಸರ್ಕಾರದ ಕಣ್ಣು. ಏಪ್ರಿಲ್ 1ರಿಂದ, 2 ಸಾವಿರಕ್ಕಿಂತ ಕ್ಕಿಂತ ಹೆಚ್ಚು ವಹಿವಾಟುಗಳನ್ನು ಯುಪಿಐ ಅಪ್ಲಿಕೇಶನ್ ಮೂಲಕ ನಡೆಸಿದರೆ, ಗರಿಷ್ಠ 1.1 ಪ್ರತಿಶತ ಇಂಟರ್‌ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ಅದರಂತೆ, ವ್ಯಾಪಾರಿ ವಹಿವಾಟಿನ ಮೇಲೆ ಶುಲ್ಕ ವಿಧಿಸಲಾಗುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.