logo
WhatsApp Image 2026-04-02 at 14.46.04.jpeg
hindalco everlast.jpeg

ಅಯೋಧ್ಯೆ ರಾಮಮಂದಿರ, ಬದರಿನಾಥದ ಬಳಿಕ ಇದೀಗ ವೈಷ್ಣೋದೇವಿಯಲ್ಲಿಯೂ ದೇಣಿಗೆ ದುರ್ಬಳಕೆ!

ಟ್ರೆಂಡಿಂಗ್
share whatsappshare facebookshare telegram
15 Jul 2026
post image

ಶ್ರೀನಗರ: ಅಯೋಧ್ಯೆ ರಾಮಮಂದಿರ ಹಾಗೂ ಬದರಿನಾಥ ದೇಗುಲ ದೇಣಿಗೆ ದುರುಪಯೋಗ ಪ್ರಕರಣದ ನಂತರ ಇದೀಗ ಜಮ್ಮುವಿನ ಕಟ್ರಾದಲ್ಲಿರುವ ವೈಷ್ಣೋದೇವಿ ದೇಗುಲದಲ್ಲಿ (Vaishno Devi Temple) ಅಕ್ರಮ ಬೆಳಕಿಗೆ ಬಂದಿದೆ. ರಾಮಮಂದಿರ ದೇಣಿಗೆ ಅಕ್ರಮದ ಬಳಿಕ ಬದರಿನಾಥ ದೇಗುಲದಲ್ಲಿಯೂ ತನಿಖೆಗೆ ಸಮಿತಿ ರಚಿಸಲಾಗಿದೆ. ಇದರ ನಂತರ ದೇಶದ ಹಲವು ದೇವಾಲಯಗಳು ತನಿಖಾ ವ್ಯಾಪ್ತಿಗೆ ಒಳಪಟ್ಟಿದ್ದು, ಇದೀಗ ವೈಷ್ಣೋದೇವಿ ದೇಗುಲದಲ್ಲಿ 530 ಕೋಟಿ ರೂ. ನಕಲಿ ಬೆಳ್ಳಿ ಹಗರಣ ನಡೆದಿರುವುದು ಪತ್ತೆಯಾಗಿದೆ.

ವೈಷ್ಟೋದೇವಿ ದೇವಸ್ಥಾನಕ್ಕೆ ಭಕ್ತರು ಅರ್ಪಿಸಿದ 530 ಕೋಟಿ ರೂ. ಮೌಲ್ಯದ ಬೆಳ್ಳಿಯಲ್ಲಿ ಬೃಹತ್ ಹಗರಣದ ಶಂಕೆ ವ್ಯಕ್ತವಾಗಿದೆ. ದೇಗುಲ ಮಂಡಳಿ ಪರೀಕ್ಷೆಗೆ ಸರ್ಕಾರಿ ಟಂಕಸಾಲೆಗೆ ಕಳುಹಿಸಿದ್ದ 20 ಟನ್ ಬೆಳ್ಳಿಯ ಪೈಕಿ ಶೇ.95ರಷ್ಟು ನಕಲಿ ಲೋಹ ಮಿಶ್ರಣವಾಗಿದ್ದು, 5%-6% ಮಾತ್ರ ಆಸಲಿ ಬೆಳ್ಳಿ ಆಗಿದೆ. ಜೊತೆಗೆ ವಿಷಕಾರಿ ಕ್ಯಾಡ್ಮಿಯಂ, ಕಬ್ಬಿಣದ ಮಿಶ್ರಣ ಪತ್ತೆಯಾಗಿದೆ ಎಂದು ತನಿಖೆ ವೇಳೆ ಬಯಲಾಗಿದೆ.

ಈ ಸಂಬಂಧ ತನಿಖೆಗೆ ವಿಳಂಬ ಮಾಡಿದ ಹಿನ್ನೆಲೆ ಕ್ರೈಂ ಬ್ರಾಂಚ್ ಅಧಿಕಾರಿಗಳಿಗೆ ಸಮನ್ಸ್ ನೀಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣವಾದ ದಾಖಲೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಮ್ಮು ನ್ಯಾಯಾಲಯದಿಂದ ಸೂಚನೆ ನೀಡಲಾಗಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.