



ಇತ್ತೀಚೆಗೆ ಇಡ್ಲಿಯಿಂದ ಕ್ಯಾನ್ಸರ್ ಬರುತ್ತೆ ಎಂದು ಆರೋಗ್ಯ ಇಲಾಖೆ ರಿಪೋರ್ಟ್ ನೀಡಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಕೆಲ ಆಹಾರಗಳ ಮೇಲೆ ಕಟ್ಟುನಿಟ್ಟಿನ ನಿಯಮವನ್ನೂ ಜಾರಿಮಾಡಿತ್ತು. ಇದೀಗ ಮತ್ತೊಂದು ತಿಂಡಿ ಮೇಲೆ ಸರ್ಕಾರ ವಾರ್ನಿಂಗ್ ನೀಡಿದೆ. ಬೆಲ್ಲದ ಗುಣಮಟ್ಟ ಕಳಪೆ ಎನ್ನುವುದು ಆಹಾರ ಇಲಾಖೆ ಪರೀಕ್ಷೆಯಿಂದ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಆಹಾರ ಇಲಾಖೆಯು ಬೆಂಗಳೂರು ಸೇರಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಬೆಲ್ಲದ ಸ್ಯಾಂಪಲ್ ಪಡೆದಿತ್ತು. ಸ್ಯಾಂಪಲ್ ಟೆಸ್ಟಿಂಗ್ ವೇಳೆ ಬೆಲ್ಲ unsafe ಎಂದು ವರದಿ ಹೊರಬಂದಿದೆ. ಇನ್ನು ಮುಂದೆ ಬೆಲ್ಲಕ್ಕೂ ಕಡಿವಾಣ ಬೀಳಲಿದೆ.
ಹೋಳಿಗೆ ಅಂಗಡಿಗಳಿಗೆ ಖಡಕ್ ಎಚ್ಚರಿಕೆ!
ನಿನ್ನೆಯಷ್ಟೇ ಅಂಗಡಿಗಳಲ್ಲಿ ರೆಡಿಮೇಡ್ ಹೋಳಿಗೆ ತಯಾರಿಕೆಯಲ್ಲೂ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ ಎಂದು ಆರೋಪಿಸಲಾಗಿದ್ದು, ರಾಜ್ಯದಾದ್ಯಂತ ಹೋಳಿಗೆ ಅಂಗಡಿಗಳ ಮೇಲೆ ಆಹಾರ ಇಲಾಖೆ ದಾಳಿ ಮಾಡಿ, ಪ್ಲಾಸ್ಟಿಕ್ ಬಳಕೆ ಮಾಡಿರೋ ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಹೋಳಿಗೆಗೆ ಪ್ಲಾಸ್ಟಿಕ್ ಕವರ್ ಬಳಸಿದ್ರೆ ವಿಷಕಾರಿ ಅಂಶ ಹೋಳಿಗೆ ಸೇರೋ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಈ ಬೆನ್ನಲ್ಲೇ ಹೋಳಿಗೆಯಲ್ಲೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.