



ಕಾರ್ಕಳ : ಕಳೆದ ಏಳೆಂಟು ತಿಂಗಳ ಕಠಿಣ ಪರಿಶ್ರಮದಿಂದ ದೇವಾಲಯದ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿವೆ ಎಂದು ಇಂಧನ ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದರು.
ಅವರು ಕಾರ್ಕಳ ಬೋರ್ಡ್ ಕಾಲೇಜು ಬಳಿ ಇರುವ ಮೈದಾನದಲ್ಲಿ ನಡೆದ ಮಾ.9 ರಿಂದ ಮಾ.14 ರವರೆಗೆ ನಡೆಯಲಿರುವ ಕಾರ್ಕಳದ ಮಾರಿಯಮ್ಮ ದೇವಾಲಯದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ ಯಲ್ಲಿ ಮಾತನಾಡಿದರು .ಸುಮಾರು 19 ಕೋಟಿ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ದೇವಾಲಯ ದಲ್ಲಿ ದುಪ್ಪಟ್ಟು ರೂಪದಲ್ಲಿ ಕೆಲಸವನ್ನು ಮಾಡುತಿದ್ದಾರೆ ಅವರಿಗೆ ದನ್ಯವಾದ ಸಲ್ಲಿಸಿದರು.
ಬ್ರಹ್ಮಕಲಶೋತ್ಸವದ 18 ಸಮಿತಿಗಳು ಕರಾರುವಕ್ಕಾಗಿ ಕಾರ್ಯನಿರ್ವಹಿಸಬೇಕು . ಮಾ.13, 14 , 15 ರಂದು ನಿತ್ಯ ಐವತ್ತು ಸಾವಿರ ಭಕ್ತರು ಸೇರಲಿದ್ದಾರೆ. ಮಾ.ಮಾರಿಯಮ್ಮ ದೇವಾಲಯವನ್ನು ತರಕಾರಿ ಹಾಗೂ ವಿವಿಧ ಹಣ್ಣು ಹಂಪಲುಗಳಿಂದ ಅಲಂಕಾರಿಕ ವ್ಯವಸ್ಥೆ ನಡೆಯಲಿದೆ . ಜಗದೀಶ್ ಮಲ್ಯ, ಶ್ರೀ ರಾಂ ಭಟ್ ಸಾಣೂರು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಸಮಿತಿಗಳಿಗೆ ಜವಾಬ್ದಾರಿ ಹಸ್ತಾಂತರಿಸಲಾಯಿತು.ಜೀರ್ಣೋದ್ಧಾರ ಸಮಿತಿ ಸದಸ್ಯರಾದ ವಿಜಯಶೆಟ್ಟಿ , ನರಸಿಂಹ ಪೈ ಪಾಲಡ್ಕ ,ಭಾಸ್ಕರ್ ಕುಲಾಲ್ , ನವೀನ್ ನಾಯಕ್ ,ಗಣೇಶ್ ಕಾಮತ್ , ಉಪ ಸ್ಥಿತರಿದ್ದರು ನವೀನ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.