



ಶಿವಮೊಗ್ಗ: ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರಾದ ಸರಕು ಅಡಿಕೆ ಇಲ್ಲಿನ ಮಾರುಕಟ್ಟೆಯಲ್ಲಿ ಶುಕ್ರವಾರ ಕ್ವಿಂಟಲ್ ಗೆ ಗರಿಷ್ಠ 82,496 ರೂಪಾಯಿಯಂತೆ ಮಾರಾಟವಾಯಿತು. ಕನಿಷ್ಠ 50,599 ರೂ. ದೊರೆತಿದೆ.
ಜುಲೈ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸರಕು ಅಡಿಕೆಯ ಗರಿಷ್ಠ ಬೆಲೆಯು 80,000 ರೂಪಾಯಿಯ ಗಡಿ ದಾಟಿತು. ಈ ಹಂಗಾಮಿನಲ್ಲಿ ಜೂನ್ 19ರಂದು ಮೊದಲ ಬಾರಿಗೆ ಸರಕು ಅಡಿಕೆಗೆ ಕ್ವಿಂಟಲ್’ಗೆ 82,400 ರೂ. ದರ ದೊರಕಿತ್ತು.
ಜೂನ್ 21ರಂದು ಗರಿಷ್ಠ 86,400 ರೂ.ಗೆ ಮಾರಾಟವಾಗುವ ಮೂಲಕ ಈ ಬಾರಿಯ ದಾಖಲೆ ಬರೆದಿತ್ತು. ಜೂನ್ 22ರಂದು ₹86,100, 27ರಂದು ₹83,200 ಬೆಲೆ ಪಡೆದಿದ್ದ ಸರಕು ಅಡಿಕೆ, ಕಳೆದೊಂದು ವಾರದಿಂದ ₹76,600ರ ಆಸುಪಾಸು ಇತ್ತು. ಈಗ ಮತ್ತೊಮ್ಮೆ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ.
ಬಸವಾಪಟ್ಟಣದಲ್ಲಿ ಶುಕ್ರವಾರ ರಾಶಿ ಅಡಿಕೆ ಕ್ವಿಂಟಲ್‌ಗೆ ಗರಿಷ್ಠ 56,399 ರೂ.ಗೆ ಏರಿಕೆಯಾಗಿದೆ. ಇದು ಈ ವರ್ಷದ ರಾಶಿ ಅಡಿಕೆಯ ಗರಿಷ್ಠ ದರ. ಏಪ್ರಿಲ್‌ನಲ್ಲಿ 48,000 ರೂ. ಇದ್ದ ರಾಶಿ ಅಡಿಕೆ ದರ ಜೂನ್‌ನಲ್ಲಿ 50,000 ರೂ.ನ ಗಡಿ ದಾಟಿತ್ತು. ಕೆಲ ದಿನಗಳಿಂದ 55,000 ರೂ.ನಿಂದ ಆಸುಪಾಸಿನಲ್ಲಿದ್ದ ದರ ಈಗ 56,399 ರೂ.ಗೆ ಏರಿದೆ.
ರಾಶಿ ಅಡಿಕೆ ಕ್ವಿಂಟಲ್‌ಗೆ ಗರಿಷ್ಠ ₹56,299, ಕನಿಷ್ಠ ₹39,201, ಬೆಟ್ಟೆ ಅಡಿಕೆ ಗರಿಷ್ಠ ₹55,382 ಹಾಗೂ ಕನಿಷ್ಠ ₹45,000 ಹಾಗೂ ಗೊರಬಲು ಗರಿಷ್ಠ ₹42,399 ಹಾಗೂ ಕನಿಷ್ಠ ₹18,000ಕ್ಕೆ ಮಾರಾಟವಾಗಿ ದಿನದ ವಹಿವಾಟು ಮುಗಿಸಿತು. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಗರಿಷ್ಠ ₹55,599, ಕೆಂಪು ಗೋಟಿಗೆ ₹42,899 ಬೆಲೆ ದೊರಕಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.