logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕ್ರಷಿ, ಹೈನುಗಾರಿಕೆ, ವಾಣಿಜ್ಯ ಬೆಳೆಗಳು ಅವನತಿಯತ್ತ ಸಾಗುತ್ತಿದೆ: ಕಿರಣ್ ಹೆಗ್ಡೆ

ಟ್ರೆಂಡಿಂಗ್
share whatsappshare facebookshare telegram
31 Dec 2021
post image

ಕಾರ್ಕಳ: ಕ್ರಷಿ ,ಹೈನುಗಾರಿಕೆ, ವಾಣಿಜ್ಯ ಬೆಳೆಗಳು ಸಮರ್ಪಕ ವಾದ ಮಾರುಕಟ್ಟೆ, ಸೂಕ್ತ ಬೆಂಬಲ ಬೆಲೆ, ದುಬಾರಿಯಾದ ಮೇವು, ದುಬಾರಿ ಗೊಬ್ಬರ, ಕ್ರಷಿ ಕಾರ್ಮಿಕರ ಕೊರತೆಯಿಂದ ಅವನತಿಯತ್ತ ಸಾಗುತ್ತಿದೆ ಇದಕ್ಕೆ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ನೇರ ಹೊಣೆ ಎಂದು ಕ್ರಷಿಕ,ಸಮಾಜ ಸೇವಕ ಕಿರಣ್ ಹೆಗ್ಡೆ ಆರೋಪಿಸಿದರು ಇವರು ಕಾರ್ಕಳ ಅನಂತಶಯನದ ಹೋಟೆಲ್ ಪ್ರಕಾಶ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು ಕ್ರಷಿಕರು ಬೆಳೆದ ಬೆಳೆಗಳನ್ನು ಖರೀದಿಸಲು ಕ್ರಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಸರಿಯಾಗಿಲ್ಲ ,ಕ್ರಷಿ ಉತ್ಪನ್ನ ಮಾರುಕಟ್ಟೆ ಮಾರುಕಟ್ಟೆಗಳಲ್ಲಿ ಸಭಾಭವನಗಳನ್ನು ಕಟ್ಟುವ ಬದಲು ಕ್ರಷಿಕರಿಗೆ ಸೂಕ್ತ ಬೆಂಬಲ ಬೆಲೆಯನ್ನು ನೀಡಲು ಸರಕಾರ ಮುಂದಾಗಬೇಕು. ಕ್ರಷಿ ಉತ್ಪನ್ನ ಮಾರುಕಟ್ಟೆಗಳಿಗೆ ಬಡ ಮತ್ತು ಸಣ್ಣ ರೈತರು ಬೆಳೆಗಳನ್ನು ತರಲು ತೀರಾ ತೊಂದರೆ ಯಾಗುತ್ತದೆ. ವಾಹನದ ವ್ಯವಸ್ಥೆ ಇಲ್ಲದೆ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆ ಸಂಕೀರ್ಣ ಕ್ಕೆ ಒಯ್ಯಲು ತೊಂದರೆ ಅನುಭವಿಸುತ್ತಿರುವ ಬಗ್ಗೆ ಮನಗಂಡು ಗ್ರಾಮ ಮಟ್ಟದಲ್ಲಿ ಮಾರುಕಟ್ಟೆಗಳನ್ನು ನಿರ್ಮಾಣ ಮಾಡುವ ಮೂಲಕ ರೈತರ ಬೆಳೆಗಳನ್ನು ಹೆಚ್ಚಿನ ಬೆಲೆ ನಿಗದಿ ಮಾಡಿ ಖರೀದಿಸುವಂತಾಗಬೇಕು ಎಂದರು, ಸಣ್ಣ ಸಣ್ಣ ರೈತರು ತಾವು ಬೆಳೆದ ಬೆಳೆಗಳನ್ನು ತಾವೇ ಮಾರುಕಟ್ಟೆ ಗಳಲ್ಲಿ ಯಾವುದೇ ಮಧ್ಯವರ್ತಿ ಗಳ ತೊಂದರೆಯಿಲ್ಲದೆ ಮಾರಾಟ ಮಾಡುವಂತಾಗಬೇಕು. ಬೇರೆ ಊರುಗಳಿಂದ ವಾಣಿಜ್ಯ ಬೆಳೆಗಳು, ಹಣ್ಣು ಹಂಪಲು, ತರಕಾರಿಗಳನ್ನು ಆಮದು ಮಾಡಿಕೊಳ್ಳುವ ಬದಲು ನಾವೇ ಸ್ವಾವಲಂಬಿಗಳಾಗಿ ನಾವೇ ಕಡಿಮೆ ಖರ್ಚು ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚು ಇಳುವರಿ ನೀಡುವ ಬೆಳೆಗಳನ್ನು ನಾವೇ ಬೆಳೆದು ನಮ್ಮ ಸ್ವಂತ ಆದಾಯವನ್ನು ನಾವೇ ಹೆಚ್ಚಿಸಿಕೊಳ್ಳುವ ಜೊತೆಗೆ ನಮ್ಮ ಆದಾಯ ಬೇರೆಡೆ ವರ್ಗಾವಣೆ ಯಾಗದಂತೆ ತಡೆಯಬಹುದು ಇದರಿಂದಾಗಿ ಈ ಭಾಗದ ಜನತೆಗೆ ಉದ್ಯೋಗ ಕೂಡ ಸ್ರಷ್ಟಿಯಾಗಲಿದೆ ಎಂದರು ನಗರ , ಗ್ರಾಮೀಣ ಪ್ರದೇಶಗಳಲ್ಲಿ ಇಂದು ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಕೋರೊನಾ, ಲಾಕ್ ಡೌನ್ ನಿಂದಾಗಿ ಜನರು ಕೆಲಸ ಕಳೆದುಕೊಂಡು ನಿರ್ಗತಿಕರಾಗುತ್ತಿದ್ದಾರೆ. ವ್ಯಾಪಾರ, ಹೋಟೆಲ್ ಉದ್ಯಮ, ಕೈಗಾರಿಕೋದ್ಯಮ ನೆಲಕಚ್ಚುತ್ತಿದೆ. ಸಣ್ಣಪುಟ್ಟ ವ್ಯಾಪಾರಿಗಳು ತಮ್ಮ ನೆಲೆಗಳನ್ನು ಕಳೆದುಕೊಂಡರೆ ವಿಧಿಯಿಲ್ಲದೆ ತಮ್ಮ ಆಸ್ತಿ ಪಾಸ್ತಿ ಗಳನ್ನು ಕಳೆದುಕೊಂಡು ನಿರ್ಗತಿಕರಾಗುತ್ತಿರುವುದು ಸರ್ವೆ ಸಾಮಾನ್ಯವಾಗುತ್ತಿದೆ ಮಾತ್ರವಲ್ಲದೆ ರೈತರು ತಮ್ಮ ಜೀವವನ್ನೆ ಕಳೆದುಕೊಂಡು ಅವರ ಸಂಸಾರ ಬೀದಿಗೆ ಬರುವಂತಾಗಿದೆ ಎಂದರು ನ್ಯಾಯಾಂಗ, ಕಾರ್ಯಾಂಗ , ಶಾಸಕಾಂಗಗಳು ತಮ್ಮ ಜವಾಬ್ದಾರಿಗಳನ್ನು ಮರೆತರೆ ಆಗುವುದಿಲ್ಲ ಅವರವರ ಜವಾಬ್ದಾರಿಯನ್ನು ನಿಬಾಯಿಸಿದರೆ ಹಲವಾರು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಇದಕ್ಕೆ ಶಾಸಕಾಂಗದ ಸದಸ್ಯರು ತಮ್ಮ ಇಚ್ಚಾ ಶಕ್ತಿಯನ್ನು ಬೆಳೆಸಿಕೂಳ್ಳಬೇಕು. ಕೇವಲ ರಸ್ತೆಯ ನಿರ್ವಹಣೆ ಹಾಗೂ ನಿರ್ಮಾಣ ಮಾಡುವುದು ಮಾತ್ರ ಜನಪ್ರತಿಗಳ ಕೆಲಸ ಅಲ್ಲ.ಬದಲಾಗಿ ಅಭಿವೃದ್ಧಿಯ ಜೊತೆಗೆ ಕ್ರಷಿಗೆ ಹೆಚ್ಚಿನ ಮಹತ್ವದ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಇದೆ.ಮುಂದಿನ ದಿನಗಳಲ್ಲಿ ರೈತರು ಹಾಗೂ ಜನ ಸಾಮಾನ್ಯರೂ ಕೂಡ ಜನಪ್ರತಿನಿಧಿಗಳನ್ನು ತಿರಸ್ಕರಿಸುವ ದಿನ ದೂರವಿಲ್ಲ ಎಂದು ಎಚ್ಚರಿಸಿದರು ಇಂದು ನಮಗೆ ಬ್ರಿಟಿಷ್ ಮಾದರಿ ಸರ್ಕಾರದ ಅವಶ್ಯಕತೆ ಇದೆ. ಬ್ರಿಟಿಷ್ ಸರಕಾರವಿದ್ದಾಗ ಕಾರ್ಕಳದ ಬಗ್ಗೆ ವಿಶೇಷ ಕಾಳಜಿವಹಿಸಿದ್ದರು .ಕಾರ್ಕಳ ದ ಬಗ್ಗೆ ನನ್ನ ಮುತ್ತಾತ ಶಿವಪ್ಪಹೆಗ್ಡೆಯವರ ಪಾತ್ರ ಮಹತ್ತರವಾದದ್ದು .ಕಾರ್ಕಳದ ಹಲವಾರು ಶಾಲೆ ,ಆಸ್ಪತ್ರೆ ಮಾರ್ಕೆಟ್ ಗಳ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಾರ್ಕಳ ಮತ್ತು ಮಂಗಳೂರು ತಾಲೂಕುಗಳನ್ನು ರಚಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರು. ಕಾರ್ಕಳದ ಬಗ್ಗೆ ಬ್ರಿಟಿಷ್ ಸರ್ಕಾರಕ್ಕಿದ ಕಾಳಜಿ ಅನನ್ಯವಾಗಿತ್ತು ಕಾರ್ಕಳವನ್ನು ಒಂದು ವ್ಯಾಪಾರ ಕೇಂದ್ರವಾಗಿ ಬೆಳೆಸುವ ಪ್ರಯತ್ನ ನಡೆಸಿದ್ದರು ಆದರೆ ಇಂದು ದೇಶದ ಬೆನ್ನೆಲುಬು ಎನ್ನುವ ರೈತರು ಸಮಸ್ಯೆಗಳಿಂದ ಕಂಗೆಟ್ಟು ಕಂಗಾಲಾಗಿದ್ದಾರೆ. ರೈತರು, ಕ್ರಷಿಕರು, ಸಣ್ಣ ವ್ಯಾಪಾರಿಗಳ ಸಮಸ್ಯೆ ,ನಿರುದ್ಯೋಗ ಸಮಸ್ಯೆ ಗಳನ್ನು ಬಗೆಹರಿಸಲು ಶಾಸಕಾಂಗ ,ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆ ಶ್ರಮಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಜನತೆ ತಿರುಗಿ ಬೀಳುವ ಸಮಯ ದೂರವಿಲ್ಲ ಎಂದರು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.