



ಕಾರ್ಕಳ: ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ 169ಎ ಅಗುಂಬೆ ಯ ನಾಲ್ಕನೇಹಾಗು ಹತ್ತನೆ ತಿರುವಿನಲ್ಲಾದ ಗುಡ್ಡ ಕುಸಿತ ದ ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ ,. ಆಗುಂಬೆ ಪ್ರದೇಶದಲ್ಲಿ ಗಳಲ್ಲಿ ಭಾರಿ ಮಳೆಯಾಗುತಿದ್ದು ರಸ್ತೆಯಯ ಇತರ ತಿರುವುಗಳಲ್ಲಿಯು ಕುಸಿತವಾಗುವ ಸಂಭವವಿದೆ. ಈಗಾಗಲೆ ರಸ್ತೆಗೆ ಅನೇಕ ಮರಗಳು ವಾಲಿಕೊಂಡಿವೆ ,ಧಾರಾಕಾರವಾಗಿ ಮಳೆಯು ಸುರಿಯುತಿದ್ದು ಮಣ್ಣು ಹದಗೊಂಡಿದೆ ಅದ್ದರಿಂದ ಭೂಕುಸಿತವಾಗುವ ಸಾಧ್ಯತೆ ಹೆಚ್ಚಿದೆ ಅಧಿಕಾರಿಗಳು ತಜ್ಞರೊಂದಿಗೆ ಅವಲೋಕಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ಹಗಲು ಕಾರ್ಯಾಚರಣೆ: ಭಾನುವಾರ ಮುಂಜಾನೆ ಭೂಕುಸಿತ ವಾದ ಅಗುಂಬೆಯ ನಾಲ್ಕನೇ ತಿರುವಿನಲ್ಲಿ ಹೆಚ್ಚು ಮಣ್ಣು ಕುಸಿದಿದ್ದರಿಂದ ಟಿಪ್ಪರ್ ಜೆಸಿಬಿಗಳ ಮೂಲಕ ರಾತ್ರಿ ಹಗಲೆನ್ನದೆ ಧಾರಾಕಾರ ಮಳೆಯಲ್ಲು ಕಾರ್ಯಾಚರಣೆ ಮುಂದುವರೆದಿತ್ತು .ಸೋಮವಾರ ಸಂಜೆಯ ವೇಳೆಗೆ ತೆರವು ಕಾರ್ಯಾಚರಣೆ ಪೂರ್ಣ ಗೊಂಡಿದೆ . ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರ ನಾಗರಾಜ್ ನಾಯಕ್ ಶಶಿಧರ್, ನವೀನ್ ರಾಜ್, ಕಾರ್ಕಳ ವನ್ಯಜೀವಿ ವಿಭಾಗದ ಡಿಎಫ್ಒ ಗಣಪತಿ,ಹೆಬ್ರಿ ಆರ್ ಎಫ್ ಒ ಗೌರವ್, ಕಾರ್ತಿಕ್ , ವಿದ್ಯಾರ್ಥ, ಲಿಂಗರಾಜ್, ವಿನಯ ಕಂದಾಯ ಅಧಿಕಾರಿಗಳು ಅಲ್ಲೆ ಬೀಡುಬಿಟ್ಟಿದ್ದು ರಾತ್ರಿ ಹಗಲು ಕಾರ್ಯಾಚರಣೆ ನಡೆಸಲು ಸಾಥ್ ನೀಡಿದ್ದಾರೆ.
ಮಂಗಳವಾರ ಜುಲೈ 12 ರಂದು ಹೈದರಾಬಾದ್ ನಿಂದ ತಜ್ಞರ ತಂಡ ಆಗುಂಬೆಯ ಭೂಕುಸಿತ ಉಂಟಾದ ಭಾಗಗಳಲ್ಲಿ ಭೇಟಿ ನೀಡಲಿದ್ದು ಅಧ್ಯಯನ ನಡೆಸಲಿದೆ .ಕುಸಿತ ಉಂಟಾದ ರಸ್ತೆ ಹಾಗೂ ತಡೆಗೋಡೆಯ ಬಗ್ಗೆ ಮಾಹಿತಿ ಪಡೆದು ತಜ್ಞರ ಜೊತೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ನಾಗರಾಜ್ ನಾಯಕ್ ಮಾಹಿತಿ ನೀಡಿದ್ದಾರೆ
ಉಡುಪಿ ಜಿಲ್ಲಾಧಿಕಾರಿ ಆದೇಶದಂತೆ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು ಭಾರಿ ವಾಹನಗಳಿಗೆ ಜುಲೈ 30ರ ತನಕ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ.
ಮಂಗಳೂರು ಉಡುಪಿ ಸಾಗುವವರು: ತೀರ್ಥಹಳ್ಳಿ ಕೊಪ್ಪ ಶೃಂಗೇರಿ ಕಾರ್ಕಳ ಮಂಗಳೂರು/ಉಡುಪಿ ಅಥವಾ ತೀರ್ಥಹಳ್ಳಿ, ಆಗುಂಬೆ ಶೃಂಗೇರಿ ಕಾರ್ಕಳ ಮಂಗಳೂರು/ಉಡುಪಿ ಯತ್ತ ಸಾಗಬಹುದು
ಕುಂದಾಪುರ ಹೋಗುವವರು: ತೀರ್ಥಹಳ್ಳಿ ಮಾಸ್ತಿಕಟ್ಟೆ ಕುಂದಾಪುರ ಬದಲಿ ರಸ್ತೆಯನ್ನು ಬಳಸಲು ಅದೇಶ ಹೊರಡಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.