



ಕಾರ್ಕಳ: ಆಗುಂಬೆ ಘಾಟಿಯಲ್ಲಿ ಭಾರಿ ಗುಡ್ಡ ಕುಸಿತ ಬದಲಿ ಮಾರ್ಗದಲ್ಲಿ ವಾಹನಗಳ ಸಂಚಾರ . ಕಳೆದ ಹಲವು ದಿನಗಳಿಂದ ತಾಲ್ಲೂಕಿನಾದ್ಯಂತ ಹಾಗೂ ಆಗುಂಬೆ ಪರಿಸರದಲ್ಲಿ ನಿರಂತರವಾಗಿ ಬರುತ್ತಿರುವ ಮಳೆಯಿಂದ .. ರವಿವಾರ ಮುಂಜಾನೆ ಕರಾವಳಿ ಹಾಗೂ ಮಲೆನಾಡು ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಆಗುಂಬೆ ಘಾಟಿಯ ಗುಡ್ಡ ಕುಸಿದು ಉಡುಪಿ ಶಿವಮೊಗ್ಗ ಉಭಯ ಜಿಲ್ಲೆಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು ಇದರಿಂದ ವಾಹನಗಳು ಬದಲಿ ಮಾರ್ಗ ಬಳಸಿ ಶಿವಮೊಗ್ಗ ಮತ್ತು ತೀರ್ಥಹಳ್ಳಿಯಿಂದ ಕರಾವಳಿ ಭಾಗಕ್ಕೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ . ಘಾಟಿಯ ನಾಲ್ಕನೆ ಸುತ್ತಿನ ರಸ್ತೆ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿದು ಮರಗಳು ಬಿದ್ದಿದೆ . ತೆರವುಗೊಳಿಸುವ ಕಾರ್ಯ ಜೆಸಿಬಿ ಮುಖಾಂತರ ಈಗಾಗಲೇ ಪ್ರಾರಂಭಗೊಂಡಿದೆ ಆದರೆ ಇನ್ನೆರಡು ದಿನ ಬೇಕಾಗಬಹುದು ಎಂದು ಸ್ಥಳೀಯರು ಹೇಳುತ್ತಾರೆ. ಅದೂ ಅಲ್ಲದೆ ನಿರಂತರವಾಗಿ ಮಳೆ ಬರುತ್ತಿದ್ದು ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.