



ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಪ್ರಪಾತಕ್ಕೆ ಉರುಳಿ ನಾಲ್ವರು ಮೃತಪಟ್ಟ ಘಟನೆ ಇಂದು ಆಗುಂಬೆ ಘಾಟಿಯಲ್ಲಿ ನಡೆದಿದೆ, ಹೆಬ್ರಿ ಯ ವ್ಯಕ್ತಿ ಯೊರ್ವರಿಗೆ ಸೇರಿದ ಈಚರ್ ವಾಹನವನ್ನು ಜೋಡುಕಟ್ಟೆಯ ಯಜ್ಞೇಶ್ ಚಾಲನೆ ಮಾಡುತ್ತಿದ್ದರು. ಹೆಬ್ರಿ ಕಡೆಗೆ ಬರುತ್ತಿದ್ದ ಈಚರ್ ಲಾರಿ ಘಾಟಿ ರಸ್ತೆಯ 5 ನೇ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ ಎಂದು ತಿಳಿದು ಬಂದಿದೆ ನಾಲ್ವರು ಸ್ಥಳದಲ್ಲೇ , ಐವರು ಗಂಭೀರವಾಗಿ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಮೃತರು ಕಾರ್ಕಳ ಮಿಯ್ಯಾರು ಸಮೀಪದವರಾಗಿದ್ದಾರೆ. ಹೆಬ್ರಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.