logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಆಗುಂಬೆ - ಮಾಳ ಘಾಟ್ ಅಗಲೀಕರಣ : ಲಕ್ಷಾಂತರ ಮರಗಳ ಬಲಿಗೆ ಕಾರಣವಾಗಲಿದೆಯೆ????

ಟ್ರೆಂಡಿಂಗ್
share whatsappshare facebookshare telegram
10 Nov 2023
post image

ಕಾರ್ಕಳ: ಮಲೆನಾಡು ಕರಾವಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ166ಎ ರ ಅಗುಂಬೆ ಘಾಟ್ ಅಗಲೀಕರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಿಸ್ತಾರವಾದ ಯೋಜನಾ ವರದಿ ಸಿದ್ಧಪಡಿಸಲು ಬೆಂಗಳೂರಿನ ಪ್ರಾದೇಶಿಕ ಕಛೇರಿಯಲ್ಲಿ ಏಜೆನ್ಸಿ ನೇಮಕ ಮಾಡಲು ಹೊರಟಿದೆ‌.

ಇನ್ನೊಂದೆಡೆ ಮಾಳ ಘಾಟ್ ಶೃಂಗೇರಿ ರಸ್ತೆ ಅಗಲೀಕರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೆಹಲಿಯ ವನ್ಯಜೀವಿ ಸಂರಕ್ಷಣಾ ವಿಭಾಗದ ಒಪ್ಪಿಗೆಗೆ ಕಳುಹಿಸಿದೆ.

ಈ ರಸ್ತೆ ಅಗಲೀಕರಣ ಕಾಮಗಾರಿಯು ಅಗುಂಬೆ ಹಾಗೂ ಮಾಳ ಘಾಟ್ ಹೆದ್ದಾರಿಗಳು ಕುದುರೆ ಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಹಾದು ಹೋಗುವುದರಿಂದ ಪರಿಸರಕ್ಕೆ ದುಷ್ಪರಿಣಾಮ ಎದುರಾಗಲಿದೆ.

ಅರಣ್ಯ ಸಂಪತ್ತುಗಳೆನು!

ಪ್ರಸ್ತುತ ಹೆದ್ದಾರಿಯು 3.5 ಮೀಟರ್ ಅಗಲವಿದ್ದು ಮುಂದೆ ಒಟ್ಟು 10 ಮೀಟರ್ ಅಗಲೀಕರಣ ಗೊಳ್ಳಲಿದೆ.ಆಗುಂಬೆ ಘಾಟಿಯಿಂದ ಹೆಬ್ರಿ ವರೆಗೆ 21 ಕಿಮೀ ಉದ್ದ , ಮಾಳ ಘಾಟ್ ನಿಂದ ತನಿಕೋಡು ಚೆಕ್ ಪೋಸ್ಟ್ ವರೆಗೆ 40 ಕಿ.ಮೀ, ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಈ ಎರಡೂ ಹೆದ್ದಾರಿಗಳ ಇಕ್ಕೆಲಗಳಲ್ಲಿ ಒಂದು ಲಕ್ಷ ಕ್ಕು ಮಿಕ್ಕಿ ಬೆಲೆಬಾಳುವ ಗಿಡಮರಗಳು ಸೇರಿದೆ. ಅವುಗಳು ಈ ಅಭಿವೃದ್ಧಿ ಕಾಮಗಾರಿಯ ಸಂದರ್ಭದಲ್ಲಿ ನಾಶವಾಗುವ ಸಾಧ್ಯತೆಗಳು ಇವೆ.ಇದರಲ್ಲಿ ಬಲಿಗೆ , ಪುಂಡಿಕೈ, ಆಯುರ್ವೇದ ಔಷಧೀಯ ಗುಣವುಳ್ಳ ಸಸ್ಯಗಳು ಒಳಗೊಂಡಿವೆ ಎಂದು ಮಾಹಿತಿ ಲಭ್ಯವಾಗಿದೆ. ಸುಮಾರು ಮೂರಕ್ಕೂ ಮಿಕ್ಕಿ ಜಲಪಾತಗಳು , 20 ಕ್ಕೂ ಮಿಕ್ಕಿ ಹಳ್ಳಕೊಳ್ಳಗಳು ತನ್ನ ಹರಿವಿನ ದಿಕ್ಕನ್ನು ಬದಲಾಯಿಸಬೇಕಾಗುತ್ತದೆ‌ .

ವೇಗಕ್ಕೆ ಕಡಿವಾಣ ಅಗತ್ಯ :ಅಭಯಾರಣ್ಯ ದೊಳಗೆ ಹೆದ್ದಾರಿ ಅಗಲೀಕರಣ ವಾದ ಬಳಿಕ ವಾಹನಗಳ ಓಡಾಟ ಹಾಗು ವೇಗ ಹೆಚ್ಚಾಗಲಿದ್ದು ಇದರಿಂದ ಆಪ್ರದೇಶದಲ್ಲಿ ಅಡ್ಡಾಡುವ ಪ್ರಾಣಿಗಳು ಸರಿಸೃಪಗಳಿಗೆ ಅಪಾಯ ಎದುರಾಗಲಿದೆ. ವಾಹನಗಳ ವೇಗಕ್ಕೆ ಕಡಿವಾಣ ಹಾಕುವ ಮುನ್ನೆಚ್ಚರಿಕೆ ಕ್ರಮವಹಿಸಬೇಕು.

ಅಗಲೀಕರಣ ಏಕೆ? :

ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಅಗುಂಬೆ ಘಾಟ್ ಮೂಲಕ ಹಾದು ಹೋಗುವ ಕಾರಣ ತೀರಾ ಇಕ್ಕಟ್ಟಾದ ರಸ್ತೆಗಳು ತಿರುವುಮುರುವು ಗಳಿಂದ ಕೂಡಿದ್ದು ಹಲವು ವಾಹನಗಳ ಅಪಘಾತಕ್ಕೂ ಕಾರಣವಾಗಿವೆ..ಇತರ ಸಣ್ಣ ಗಾತ್ರದ ವಾಹನಗಳು ಮಾತ್ರ ಸಂಚರಿಸುತಿದ್ದು ಅಗಲೀಕರಣ ವಾದರೆ ಎಲ್ಲಾ ಘನವಾಹನಗಳ ಸಂಚಾರಕ್ಕೆ ಮುಕ್ತ ವಾಗಲಿದೆ .

ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಆಗುಂಬೆಯೂ ಒಂದಾಗಿದೆ. ಇದೆ ಕಾರಣ ದಿಂದ ಆಗುಂಬೆಯನ್ನು ದಕ್ಷಿಣದ ಚಿರಪುಂಜಿ ಕರೆಯಲಾಗುತ್ತದೆ. ಆಗುಂಬೆ ಘಾಟಿಯಲ್ಲಿ ಒಟ್ಟು ಹದಿನಾಲ್ಕು ತಿರುವುಗಳಿದ್ದು, ಮೇಲ್ಭಾಗದ ಏಳು ಸುತ್ತುಗಳು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ, ಕೆಳಗಿನ ಏಳು ಸುತ್ತುಗಳು ಉಡುಪಿ ಜಿಲ್ಲಾ ವ್ಯಾಪ್ತಿಗೆ ಸೇರುತ್ತವೆ.ಕುದುರೆ ಮುಖ ವನ್ಯಜೀವಿ ವಿಭಾಗವು ಅತಿಸೂಕ್ಷ್ಮ ವಲಯಗಳಲ್ಲಿ ಒಂದಾಗಿದೆ . .

ಈಗಾಗಲೇ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ. ಮಳೆ ಚಳಿಗಾಲದ ಬದಲು ಬೇಸಿಗೆ ಕಂಡುಬರುತ್ತಿದೆ. ಮುಂದಿನ ಭವಿಷ್ಯಕ್ಕೆ ಬರಗಾಲವೆ ಉಡುಗೊರೆ ಯಾಗಲಿದೆ.ಅರಣ್ಯ ನಾಶವಾಗಿ ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.