



ನವ ದೆಹಲಿ, ಮಾರ್ಚ್ 10: ಸುಮಾರು 300 ಜನರಿದ್ದ ವಿಮಾನ (flight) ಅಮೆರಿಕದಿಂದ ಭಾರತದತ್ತ ಹೊರಟಿತ್ತು. ಬಹುತೇಕರು ತಾಯ್ನಾಡಿಗೆ ಹಿಂದಿರುಗುತ್ತಿದ್ದೇವೆ ಎಂಬ ಸಂತಸದಲ್ಲಿ ಬಿಗುಮಾನದಿಂದ ವಿಮಾನ ಏರಿದ್ದರು. ಆದರೆ ಐದೇ ತಾಸುಗಳಲ್ಲಿ ಈ ಪ್ರಯಾಣಿಕರ ಕನಸು ಭಗ್ನವಾಗಿದೆ. ಇದ್ದಕ್ಕಿದ್ದಂತೆ ವಿಮಾನ ಯೂ ಟರ್ನ್ ಹೊಡೆದು ಮತ್ತೆ ಅಮೆರಿಕದತ್ತ ಮುಖ ಮಾಡಿದೆ. ಅಷ್ಟಕ್ಕೂ ಇಷ್ಟೇಲ್ಲಾ ಆಗೋಕೆ ಕಾರಣ ಟಾಯ್ಲೆಟ್
ಅಮೆರಿಕದ ಶಿಕಾಗೋ ನಗರದಿಂದ ಭಾರತದ ನವದೆಹಲಿಯತ್ತ ಹೊರಟಿದ್ದ ಏರ್ ಇಂಡಿಯಾ ವಿಮಾನ 126 ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಈ ವಿಮಾನದಲ್ಲಿದ್ದ ಟಾಯ್ಲೆಟ್‌ಗಳು ಬ್ಲಾಕ್ ಆಗಿ ಉಪಯೋಗಿಸಲು ಬರದಷ್ಟು ಕೆಟ್ಟಿದ್ದು. ಕಂಗಾಲಾದ ವಿಮಾನದ ಕ್ಯಾಪ್ಟನ್ ಹಾಗೂ ಸಿಬ್ಬಂದಿ ತಕ್ಷಣವೇ ವಿಮಾನವನ್ನ ಮತ್ತೆ ಶಿಕಾಗೋದತ್ತ ತಿರುಗಿಸಿದ್ದಾರೆ. ಇದರ ಬಗ್ಗೆ ಅಲರ್ಟ್ ಆದ ಪ್ರಯಾಣಿಕರು ಗಲಾಟೆ ಮಾಡಿದಾಗ ಟಾಯ್ಲೆಟ್ ಸಮಸ್ಯೆಯ ಬಗ್ಗೆ ಸಿಬ್ಬಂದಿ ಹೇಳಿದ್ದಾರೆ. ಮಾರ್ಚ್ 6ರಂದು ನಡೆದ ಈ ಘಟನೆ ಬಗ್ಗೆ ಸಾರ್ವಜನಿಕವಾಗಿ ಈಗ ಆಕ್ರೋಶ ವ್ಯಕ್ತವಾಗುತ್ತಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.