



ನವದೆಹಲಿ: ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟವು ಅಪಾಯಕಾರಿ ಹಂತಕ್ಕೆ ತಲುಪಿದೆ.ಜನಪಥ್‌ನಲ್ಲಿಇಂದು ಬೆಳಿಗ್ಗೆ ಮಾಲಿನ್ಯ ಮಾಪಕ 2.5 ಸಾಂದ್ರತೆಯು 655.07 ರಷ್ಟಿತ್ತು.
ದೆಹಲಿಯ ಆಕಾಶವನ್ನು ದಟ್ಟವಾದ ಹೊಗೆಯ ಹೊದಿಕೆಯು ಆವರಿಸಿದೆ , ಹಲವರು ಗಂಟಲಿನ ತುರಿಕೆ ಮತ್ತು ಕಣ್ಣಿನಲ್ಲಿ ನೀರು ತುಂಬಿಕೊಂಡಿದೆ ಎಂದು ದೂರಿದ್ದಾರೆ.
ದೆಹಲಿಯ ಮಂಜಿನ ಪರಿಸ್ಥಿತಿಗಳು ಶುಕ್ರವಾರ ಬೆಳಿಗ್ಗೆ ತೀವ್ರಗೊಂಡಿದ್ದು, ಸಫ್ದರ್‌ಜಂಗ್ ಮತ್ತು ಪಾಲಂ ವಿಮಾನ ನಿಲ್ದಾಣಗಳಲ್ಲಿ 200 ಮೀ ನಿಂದ 500 ಮೀ ವ್ಯಾಪ್ತಿಯವರೆಗೆ ಗೋಚರತೆ ಕುಸಿದಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ವಿಜ್ಞಾನಿಗಳು ತಿಳಿಸಿದ್ದಾರೆ. ದೆಹಲಿ, ಪಂಜಾಬ್ ಸೇರಿದಂತೆ ಪಶ್ಚಿಮ ಬಂಗಾಳ ರಾಜಸ್ತಾನ , ಚತ್ತೀಸಘಡ ಬಿಹಾರ ರಾಜ್ಯಗಳಲ್ಲಿ ಪಟಾಕಿ ನಿಷೇಧಿಸಿ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಕರ್ನಾಟಕ ಸೇರಿದಂತೆ ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಲಾಗಿದೆ. ಇತರೆ ಪಟಾಕಿಗೆ ಅವಕಾಶವಿಲ್ಲ. ಈ ನಿರ್ಧಾರ ಪರ ವಿರೋಧಕ್ಕೆ ಕಾರಣಾಗಿದೆ. ಹಿಂದೂಗಳ ಹಬ್ಬಕ್ಕೆ ಮಾತ್ರ ಪಟಾಕಿ ನಿಷೇಧ ಯಾಕೆ ಅನ್ನೋ ವಾದವೂ ಹೆಚ್ಚಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.