



ನವದೆಹಲಿ: ಏರ್ ಟೆಲ್ 5ಜಿ ಸೇವೆಯನ್ನು ಹೊಸದಾಗಿ 125 ನಗರಗಳಿಗೆ ವಿಸ್ತರಿಸಿದೆ. ಇದರಿಂದ ಈಗ ದೇಶದ ಒಟ್ಟು 265 ನಗರಗಳಲ್ಲಿ ಏರ್ ಟೆಲ್ 5ಜಿ ಸೇವೆ ಲಭ್ಯವಾಗಲಿದೆ.
‘5ಜಿ ಇಂಟರ್ನೆಟ್ ಜಗತ್ತಿನಲ್ಲೇ ಕ್ರಾಂತಿಯುಂಟು ಮಾಡಿದೆ. ಸಂಪರ್ಕ ಹಾಗೂ ಸಂವಹನದ ಹೊಸ ಯುಗವನ್ನು ಸೃಷ್ಟಿಸಿದ್ದು, ದೇಶದ ಮಟ್ಟಿಗೆ ಬದಲಾವಣೆಯ ಹರಿಕಾರನಾಗಿದೆ. ಏರ್ ಟೆಲ್ ತನ್ನ ಗ್ರಾಹಕರಿಗೆ ಅತ್ಯುನ್ನತ ಗುಣಮಟ್ಟದ ನೆಟ್ ವರ್ಕ್ ಹಾಗೂ ಸೇವೆಗಳನ್ನು ನೀಡುವ ಉದ್ದೇಶಕ್ಕೆ ಬದ್ಧವಾಗಿದೆ. ಇಂದು ನಾವು ಇನ್ನೂ 125 ನಗರಗಳಿಗೆ ನಮ್ಮ ಸೇವೆ ವಿಸ್ತರಿಸಿದ್ದೇವೆ’ ಎಂದು ಭಾರ್ತಿ ಏರ್ ಟೆಲ್ ಸಿಟಿಒ ರಣ್ ದೀಪ್ ಸೆಖೋನ್ ತಿಳಿಸಿದ್ದಾರೆ.
5ಜಿ ಅನ್ನೋದು ಐದನೇ ತಲೆಮಾರಿನ ಮೊಬೈಲ್ ನೆಟ್ ವರ್ಕ್ ಆಗಿದ್ದು, ದೊಡ್ಡ ಪ್ರಮಾಣದ ಡೇಟಾವನ್ನು ಅತ್ಯಂತ ವೇಗದಲ್ಲಿ ವರ್ಗಾವಣೆ ಮಾಡುವ ಸಾಮರ್ಥ್ಯ ಹೊಂದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.