logo
WhatsApp Image 2026-04-02 at 14.46.04.jpeg
hindalco everlast.jpeg

ಅಜೆಕಾರು: ಮಲಗಿದ್ದ ಸ್ಥಿತಿಯಲ್ಲಿಯೇ ವ್ಯಕ್ತಿ ಸಾವು

ಟ್ರೆಂಡಿಂಗ್
share whatsappshare facebookshare telegram
5 Feb 2022
post image

ಅಜೆಕಾರು: ವಿಪರೀತವಾಗಿ ಮದ್ಯ ಸೇವಿಸಿ ಮಲಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅಜೆಕಾರಿನ ಕೆರ್ವಾಶೆ ಪೇಟೆಯಲ್ಲಿ ಫೆ.5ರಂದು ಬೆಳಿಗ್ಗೆ ನಡೆದಿದೆ. ಕೆರ್ವಾಶೆ ನಿವಾಸಿ 53 ವರ್ಷದ ಹಮೀದ್ ಮೃತಪಟ್ಟ ವ್ಯಕ್ತಿ. ಇವರು ವಿಪರೀತ ಸಾರಾಯಿ ಕುಡಿಯುವ ಅಭ್ಯಾಸ ಹೊಂದಿದ್ದು,  ಸುಮಾರು 1ವರ್ಷದಿಂದ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಒಬ್ಬಂಟಿಯಾಗಿ ಕೆರ್ವಾಶೆಯಲ್ಲಿ ಸುತ್ತ-ಮುತ್ತ ತಿರುಗಾಡುತ್ತಿದ್ದರು. ಆರು ತಿಂಗಳಿನಿಂದ ಮನೆಗೆ ಹೋಗದೆ ಕೆರ್ವಾಶೆ ಪೇಟೆಯಲ್ಲಿಯೇ ಶೇಂದಿ ಅಂಗಡಿಯ ವರಾಂಡದಲ್ಲಿ ಮಲಗುತ್ತಿದ್ದರು. ಎಂದಿನಂತೆ ಫೆ‌.4ರಂದು ಸಂಜೆ ವಿಪರೀತ ಸಾರಾಯಿ ಕುಡಿದು ಹಳೆ ಸೇಂದಿ ಅಂಗಡಿಯ ವರಾಂಡದಲ್ಲಿ ಮಲಗಿದ್ದರು. ಇಂದು ಬೆಳಿಗ್ಗೆ ನೋಡುವಾಗ ಹಮೀದ್ ಮೃತಪಟ್ಟಿದ್ದಾರೆ‌‌. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.