



ಅಜೆಕಾರು: ಕಾರ್ಕಳ ತಾಲೂಕಿನ ಎಣ್ಣೇಹೊಳೆ ಗುಳಿ ಬೆಟ್ಟು ಎಂಬಲ್ಲಿನ ಶುಭಾಷಿಣಿ( 40) ಎಂಬುವವರು ಮಾಳಿಗೆ ಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಭಾಷಿಣಿ ರಘುನಾಥ ಮೂಲ್ಯರವರೊಂದಿಗೆ ವಾಸವಿದ್ದು ಸುಮಾರು 10 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು ಈ ಬಗ್ಗೆ ಮಣಿಪಾಲ ಕಸ್ತೂರ್ಬ ಆಸ್ವತ್ರೆಯ ವೈದ್ಯರಿಂದ ಚಿಕಿತ್ಸೆ ಹಾಗೂ ಮದ್ದನ್ನು ಕೊಡಿಸುತ್ತಿದ್ದು, ಇತ್ತೀಚೆಗೆ 4 ತಿಂಗಳ ಹಿಂದೆ ಶುಭಾಷಿಣಿಯವರಿಗೆ ಮಾನಸಿಕ ಖಾಯಿಲೆ ಜಾಸ್ತಿಯಾದ ಕಾರಣ ಗಂಡ ಅವರನ್ನು ಎಣ್ಣೆಹೊಳೆಯಲ್ಲಿರುವ ಅಕ್ಕ ಶೋಭಾರ ಮನೆಗೆ ತಂದು ಬಿಟ್ಟಿದ್ದರು. ನಂತರ ಅವರನ್ನು ಮೂರು ಬಾರಿ ಮಣಿಪಾಲ ಕಸ್ತೂರ್ಬ ಆಸ್ವತ್ರೆಗೆ ಕರೆದುಕೊಂಡು ಹೋಗಿ ಮದ್ದನ್ನು ಕೊಡಿಸಿದ್ದರು .ಮನೆಯ ಸದಸ್ಯ ಶ್ರೀಧರ ಮೂಲ್ಯ ಕೆಲಸದ ನಿಮಿತ್ತ ಸುಕೇಶ್ ಹೆಗ್ಡೆಯವರ ತೋಟದ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಜೆಕಾರು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.