logo
WhatsApp Image 2026-04-02 at 14.46.04.jpeg
hindalco everlast.jpeg

ಅಜೆಕಾರು: ಮನೆಯ ಹಂಚು ತೆಗೆದು ಒಡವೆ ನಗದು ಕಳವು

ಟ್ರೆಂಡಿಂಗ್
share whatsappshare facebookshare telegram
23 Feb 2022
post image

ಕಾರ್ಕಳ: ಮನೆಯ ಹಂಚು ತೆಗೆದು ಮನೆಗೆ ನುಗ್ಗಿ ಚಿನ್ನಾಭರಣ ಹಾಗು ನಗದು ಕಳವು ಮಾಡಿದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಸೂರ್ಯಂತೊಕ್ಲು ಶಾಲೆ ಬಳಿ ನಡೆದಿದೆ.ದೀಪಿಕಾ ಎಂಬುವರು ಫೆ.22 ರಂದು ತನ್ನ ತಾಯಿ ಮನೆ ಶಿರ್ಲಾಲು ಪಯ್ಯಂದೆಗೆ ಹೋಗಿ ದ್ದ ಸಂದರ್ಭದಲ್ಲಿ ಫೆ.23 ರಂದು ಬೆಳಗ್ಗೆ ಮನೆಗೆ ಬಂದು ನೋಡಿದ್ದಾಗ ಮನೆಯ ಹಂಚು ತೆಗೆದು ಬೆಡ್ರೂಂ ನಲ್ಲಿದ್ದ ಕಬ್ಬಿಣದ ಬೀರುವಿನ ಬಾಗಿಲಿನ ಬೀಗ ತೆಗೆದು ಅದರಲ್ಲಿದ್ದ ಬಟ್ಟೆ ಹಾಗೂ ಚಿನ್ನಾಭರಣ ನಗದು ಕಳವು ಗೈದ ಅಂಶ ಬೆಳಕಿಗೆ ಬಂದಿದೆ. 29 ½ ಗ್ರಾಂ ಚಿನ್ನದ ಒಡವೆಗಳನ್ನು ಅದರ ಮೌಲ್ಯ ರೂಪಾಯಿ 1,18,000/- ಹಾಗೂ ಪರ್ಸ್‌ನಲ್ಲಿದ್ದ ನಗದು ಹಣ ರೂಪಾಯಿ 15,000/- ಗಳನ್ನು ಕಳ್ಳರು ಕದ್ದಿದ್ದಾರೆ. ದೀಪಿಕಾ ರವರು ಅಜೆಕಾರು ಠಾಣೆಯಲ್ಲಿ ದೂರು ನೀಡಿದ್ದು ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.