



ಅಜೆಕಾರು : ಲಾರಿ ಬೈಕ್ ಮುಖಾಮುಖಿ ಢಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಅಜೆಕಾರು ಚರ್ಚ್ ಕ್ರಾಸ್ ಬಳಿ ನಡೆದಿದೆ. ಸವಾರ ಸ್ಥಳೀಯ ಯುವಕನೆಂದು ತಿಳಿದು ಬಂದಿದೆ . ಕಾರ್ಕಳ ದಿಂದ ಕೆಂಪುಕಲ್ಲನ್ನು ತುಂಬಿಸಿಕೊಂಡು ಬರುತಿದ್ದ ಲಾರಿಯು ಚರ್ಚ್ ಕ್ರಾಸ್ ಬಳಿ ಏಕಾಏಕಿ ರಸ್ತೆ ಬದಿಯಲ್ಲಿ ಬೈಕ್ ನಲ್ಲಿ ನಿಂತಿದ್ದ ಯುವಕನ ಮೇಲೆ ಚಲಿಸಿದೆ . ಪರಿಣಾಮ ಯುವಕ ಗಂಭೀರ ಗಾಯಗೊಂಡಿದ್ದಾನೆ . ಸ್ಥಳದಲ್ಲಿ ನಿಲ್ಲಿಸಿದ್ದ ಎರಡು ಬೈಕುಗಳು ನಜ್ಜುಗುಜ್ಜಾಗಿವೆ ಅಜೆಕಾರು ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನಿಡಿದ್ದಾರೆ . ಗಾಯಗೊಂಡ ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ .ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.