



ಕಾರ್ಕಳ : ಕಾರ್ಕಳ ತಾಲೂಕಿನ ಅಜೆಕಾರು ಠಾಣೆ ವ್ಯಾಪ್ತಿಯಲ್ಲಿ ನ.11 ರ ಬೆಳಗ್ಗಿನ ಒಂದು ಘಂಟೆ ಸಮಯದಲ್ಲಿ ಅಜೆಕಾರು ಠಾಣೆಯ ಪೋಲೀಸರು ರೌಂಡ್ಸ್ ನಲ್ಲಿದ್ದಾಗ ಶಿರ್ಲಾಲು ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ಅನುಮಾನಾಸ್ಪದ ಓಮ್ನಿ ಕಾರು ನಿಂತಿದ್ದು ಠಾಣಾಧಿಕಾರಿಯ ವಾಹನವನ್ನು ಗಮನಿಸಿ ಒಮ್ಮೆಲೆ ಸ್ಟಾರ್ಟ್ ಮಾಡಿ ಓಡಲೆತ್ನಿಸಿದಾಗ ಒಮ್ನಿ ಕಾರು ಅಂಡಾರಿನತ್ತ ವೇಗವಾಗಿ ಹೋಗುತಿದ್ದಾಗ ಅದರ ಹಿಂಭಾಗದಲ್ಲಿ ಹಿಂಸಾತ್ಮಕ ವಾಗಿ ದನಗಳನ್ನು ತುಂಬಿಸಿಕೊಂಡು ಹೋಗುತಿದ್ದು ಪೋಲಿಸರು ಹಿಂಬಾಲಿಸಿಕೊಂಡು ಅಂಡಾರು, ಅಜೆಕಾರು , ಕೈಕಂಬ , ಹಂಚಿಕಟ್ಟೆ, ಹೆರ್ಮುಂಡೆ, ಜಾರ್ಕಳ ಮುಂಡ್ಲಿ ಮಾರ್ಗವಾಗಿ ಹೋಗಿ ತೆಳ್ಳಾರು ಗ್ರಾಮದ ತೆಳ್ಳಾರು ರೈಸ್ ಮಿಲ್ ಬಳಿ ಓಮ್ನಿಯನ್ನು ಬಿಟ್ಟು 3 ಜನ ಗೋಕಳ್ಳರು ಹಾಡಿಯತ್ತ ಓಡಿ ಹೋಗಿದ್ದಾರೆ. ಓಮ್ನಿಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದ್ದು ಎರಡು ದನಗಳು ಪತ್ತೆಯಾಗಿದೆ. ದನಗಳನ್ನು ಹಿಂಸಾತ್ಮಕವಾಗಿ ಕಾಲು ಕಟ್ಟಿ ಕಸಾಯಿ ಖಾನೆಗೆ ತುಂಬಿಸಿಕೊಂಡು ಹೋಗುತಿದ್ದರು ಎಂದು ಮಾಹಿತಿ ಲಭಿಸಿದ್ದು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ . ಅಜೆಕಾರು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.