


ಹೆಬ್ರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹೆಬ್ರಿ ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆಯ ಉದ್ಘಾಟನೆಯನ್ನು ಅಜೆಕಾರು ಪರಿಸರದ ಗುಡ್ಡೆ ಅಂಗಡಿಯಲ್ಲಿ ನಡೆಸಲಾಯಿತು. ಉದ್ಘಾಟನೆಯನ್ನು ನಡೆಸಿದ ಮರ್ನೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಪ್ರಭಾವತಿ ಮಾತನಾಡಿ, ಗ್ರಾಮೀಣ ಮಟ್ಟದ ಬಡವರಿಗೆ ಇಂತಹ ಮನೆಗಳನ್ನು ಕಲ್ಪಿಸಿಕೊಟ್ಟಾಗ ಅವರ ಬದುಕು ಹಸನಾಗುತ್ತದೆ ಎಂದರು.
ಇನ್ನೋರ್ವ ಅತಿಥಿ ಜನಜಾಗೃತಿ ವೇದಿಕೆಯ ಸದಸ್ಯರಾದ ನಂದಕುಮಾರ್ ಹೆಗ್ಡೆ ಮಾತನಾಡುತ್ತಾ, ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ನಡೆಸಿದಾಗ ಸಮಾಜದಲ್ಲಿ ಎಲ್ಲರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುವುದು, ಇಂತಹ ಕಾರ್ಯಕ್ರಮ ಕ್ಷೇತ್ರದ ಒಂದು ಅದ್ಭುತ ಕಾರ್ಯಕ್ರಮ ಈ ಕಾರ್ಯಕ್ರಮದಿಂದಾಗಿ ಅದೆಷ್ಟೋ ನಿರ್ಗತಿಕರಿಗೆ ನೆಮ್ಮದಿಯ ಜೀವನ ನಡೆಸಲು ಒಂದು ಸೂರು ಒದಗಿಸಿದಂತಾಗಿದೆ ಇದಕ್ಕಾಗಿ ಪೂಜ್ಯರಿಗೆ ನಾವೆಲ್ಲರೂ ಆಭಾರಿಯಾಗಿದ್ದೇವೆ ಎಂದರು.
ವಾತ್ಸಲ್ಯ ಮನೆಗಾಗಿ ಹಗಲು ರಾತ್ರಿ ಸೇವೆಯಲ್ಲಿ ಶ್ರಮಿಸಿದ ವಿಪತ್ತು ತಂಡದ ಸದಸ್ಯರಿಗೆ ಗಣ್ಯರಿಂದ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹೆಬ್ರಿ ತಾಲೂಕಿನ ಯೋಜನಾಧಿಕಾರಿ ಲೀಲಾವತಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಚಂದ್ರಾವತಿ ಮೇಲ್ವಿಚಾರಕರಾದ ಉದಯ ಟಿ. ದೇವಾಡಿಗ ಊರಿನ ಗಣ್ಯರಾದ ಅಲೆಕ್ಸ್ ಡಿಸೋಜಾ ಯಶೋಧ ಶೆಟ್ಟಿ ಶಾಂತಿ ರಾಜ್ ಜೈನ್ ಪ್ರಶಾಂತ್ ಶೆಟ್ಟಿ ವಿದ್ಯಾಪೈ ಜಲಜ ಶೆಟ್ಟಿ ಜಗದೀಶ್ ಶೆಟ್ಟಿ ಕೃಷ್ಣಮೂರ್ತಿ ಒಕ್ಕೂಟದ ಅಧ್ಯಕ್ಷರಾದ ಪ್ರವೀಣ್ ಮಡಿವಾಳ ವಿಪತ್ತು ಘಟಕದ ಅಧ್ಯಕ್ಷರಾದ ಅಕ್ಷಯ ಪ್ರಭು ಸೇವಾ ಪ್ರತಿನಿಧಿ ವಿಜಯಕಾಮತ್ ಹಾಗೂ ವಿಪತ್ತು ಘಟಕದ ಸರ್ವ ಸದಸ್ಯರು ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.