logo
WhatsApp Image 2026-04-02 at 14.46.04.jpeg
hindalco everlast.jpeg

ಅಜೆಕಾರು: ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಗೆ ವಾಹನ ಡಿಕ್ಕಿ - ಕಂಪನಿ ಸೂಪರ್‌ ವೈಸರ್ ಮೃತ್ಯು..!

ಟ್ರೆಂಡಿಂಗ್
share whatsappshare facebookshare telegram
15 Feb 2024
post image

ಅಜೆಕಾರು ಫೆ.15: ಕಾರ್ಕಳ ಸಮೀಪದ ರಸ್ತೆ ಕಾಮಗಾರಿಯ ಸಿಮೆಂಟ್ ಮಿಕ್ಸರ್ ವಾಹನವೊಂದು ಡಿಕ್ಕಿ ಹೊಡೆದು ಸೂಪರ್ ವೈಸರ್ ಮೃತಪಟ್ಟ ಘಟನೆ ಪಡುಕುಡೂರು ಗ್ರಾಮದಲ್ಲಿ ನಡೆದಿದೆ.

ಸೂಪರ್ ವೈಸರ್ ಭಾಷಿ ವೈ ಮೃತಪಟ್ಟವರು. 4 ದಿನ ಹಿಂದೆ ಪ್ರಾರಂಭಿಸಿದ ಪಡುಕುಡೂರು ಗ್ರಾಮದ ಕೊಡಮಣಿತ್ತಾಯ ದೇವಸ್ಥಾನವರೆಗಿನ ಮುಖ್ಯರಸ್ತೆಯ ಕಾಮಗಾರಿಯ ವೇಳೆ ನಿನ್ನೆ ಸಂಜೆ ಪಡುಕುಡೂರು ಗ್ರಾಮದ ಭದ್ರಕಾಳಿ ದೇವಸ್ಥಾನದ ಬಳಿ ರಸ್ತೆ ನಿರ್ಮಾಣ ಕಾಮಗಾರಿಗೆ ಬಳಸುತ್ತಿದ್ದ ನೋಂದಣಿಯಾಗದ ಹೊಸ ಸಿಮೆಂಟ್ ಮಿಕ್ಸರ್ ವಾಹನದ ಚಾಲಕ ಸಂಜು ಶರಣಪ್ಪ ಎಂಬಾತನು ವಾಹನವನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಹಿಂದಕ್ಕೆ ಚಲಾಯಿಸಿದ್ದನು. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಕಂಪನಿಯ ಸೂಪರವೈಸರ್ ಭಾಷಿ ವೈ ಎನ್ನುವವರಿಗೆ ಡಿಕ್ಕಿ ಹೊಡೆದಿದ್ದಾನೆ.

ಪರಿಣಾಮ ವಾಹನದ ಚಕ್ರ ಅವರ ಮೇಲೆ ಹರಿದು ತೀವೃ ಗಾಯಗೊಂಡಿದ್ದ ಭಾಷಿ ಅವರನ್ನು ಕೂಡಲೇ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಭಾಷಿ ವೈ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.