



ನವದೆಹಲಿ :ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಿರಿಯರ ಆಯ್ಕೆ ಸಮಿತಿಯ ಮುಖ್ಯಸ್ಥ ಹುದ್ದೆಗೆ ಟೀಮ್ ಇಂಡಿಯಾ ಮಾಜಿ ಆಲ್ ರೌಂಡರ್ ಅಜಿತ್ ಅಗರ್ಕರ್ ನೇಮಕಗೊಂಡಿದ್ದಾರೆ.
ಸುಲಕ್ಷಣ ನಾಯಕ್ ಅಶೋಕ್ ಮೆಲ್ಹೋತ್ರ ಹಾಗೂ ಜತಿನ್ ಪರಂಜಾಪೆ ಅವರನ್ನ ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಅಜಿತ್ ಅವರನ್ನು ಭಾರತ ಪುರುಷರ ತಂಡದ ಮುಖ್ಯ ಆಯ್ಕೆದಾರರನ್ನಾಗಿ ನೇಮಿಸಿದೆ. ಅಜಿತ್ ಅಗರ್ಕರ್ ನೇತೃತ್ವದ ಬಿ ಸಿ ಸಿ ಐ ಆಯ್ಕೆ ಸಮಿತಿಯಲ್ಲಿ ಶಿವ ಸುಂದರ್ ದಾಸ್ ಸುಬ್ರೊತೋ ಬ್ಯಾನರ್ಜಿ, ಸಲೀಲ್ ಅಂಕೋಲಾ ಹಾಗೂ ಶ್ರೀಧರಬ್ ಶರತ್ ನೇಮಕಗೊಂಡಿದ್ದಾರೆ.
ಬಿಸಿಸಿಐ ಸಂಬಂಧ ಹಲವು ಗೌಪ್ಯ ಅಂಶಗಳನ್ನು ಬಹಿರಂಗಪಡಿಸಿ ತಗಲಾಕಿಕೊಂಡಿದ್ದ ಚೇತನ್ ಶರ್ಮಾ ಕಳೆದ ಫೆಬ್ರವರಿಯಲ್ಲಿ ಮುಖ್ಯ ಆಯ್ಕೆದಾರರ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಇದೀಗ ಅಜಿತ್ ಅಗರ್ಕರ್ ನೇಮಕಗೊಂಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.