logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಪಿಲಿಬಾಯ್ ಕರಾಮತ್ತಿಗೆ ಯುವಕರೆಲ್ಲ ಶೈನ್.

ಟ್ರೆಂಡಿಂಗ್
share whatsappshare facebookshare telegram
21 Apr 2024
post image

ಭೂಮಿಕಾ ಗುಡ್ಡೆಯಂಗಡಿ,ಜರ್ನಲಿಸಂ ವಿಭಾಗ ಎಂಪಿಎಂ ಕಾಲೇಜು ಕಾರ್ಕಳ

ಹಿರಿಯಡ್ಕ : ಶ್ರಾವಣ ಬಂತೆಂದರೆ ಹಬ್ಬಗಳದ್ದೆ ಸರತಿ ಸಾಲಿನಲ್ಲಿ ಬರುತ್ತವೆ. ಕರಾವಳಿ ಭಾಗದಲ್ಲಿ ಕೃಷ್ಣಾಷ್ಟಮಿ ಗಣೇಶ ಚತುರ್ಥಿ ನವರಾತ್ರಿ ಬಂದರೆ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಾಸೆ ಗಳ ಸದ್ದು ಎಲ್ಲೆಡೆ ಕೇಳಿಸುತ್ತದೆ. ರಥ ಬೀದಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮರಿಹುಲಿಗಳು ಸಿಂಹಗಳು ಕುಣಿಯುವುದು ವಾಡಿಕೆಯಾಗಿದೆ. ಕೆಲವು ಕಡೆಗಳಲ್ಲಿ ಅಲ್ಲಲ್ಲಿ ತಾಸೆಯ ಸದ್ದಿಗೆ ತಾಲೀಮುಗಳು ಕಾಣಿಸುವುದು ಸಹಜವಾಗಿದೆ . ಹುಲಿ ವೇಷವೆಂದರೆ ಬರಿ ಕುಣಿತವಲ್ಲದೆ ಇದು ಕರಾವಳಿಯ ಜನರ ನಾಡಿಮಿಡಿತವಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಆಸಕ್ತಿ ಅರಳಿಸುವ ಹುಲಿ ನೃತ್ಯ ಮೇಲ್ನೋಟಕ್ಕೆ ಮನರಂಜನೆಯ ವಿಷಯವಾಗಿ ಕಂಡರೂ ಮೂಲತ: ಇದು ಆರಂಭವಾಗಿದ್ದು ಆರಾಧನೆಯ ರೂಪದಲ್ಲಿ.

ಮೊದಲಿಗೆ ಹುಲಿ ವೇಷ ಆರಂಭವಾದದ್ದು ಮಂಗಳೂರಿನ ಮಂಗಳಾ ದೇವಿ ದೇವಸ್ಥಾನದಲ್ಲಿ. ಹುಲಿ ವೇಷದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರಾರು ಐತಿಹ್ಯಗಳಿವೆ. ಅವುಗಳಲ್ಲಿ ಒಂದು ಇಲ್ಲಿದೆ.
ಅನಾರೋಗ್ಯಕ್ಕೀಡಾದ ತಾಯಿಯೊಬ್ಬಳು ಮಂಗಳೂರಿನ ಮಂಗಳಾ ದೇವಿ ದೇವಸ್ಥಾನಕ್ಕೆ ಬಂದು ತಾಯಿ ದೇವಿ ಎದುರು ನಿಂತು, ಮಗುವಿಗೆ ಸರಿಯಾಗಿ ನಡೆಯಲಾಗುತ್ತಿಲ್ಲ, ಮಾತು ಬರುತ್ತಿಲ್ಲ. ಮಗು ಸರಿಯಾಗಿ ನಡೆದು ಮಾತನಾಡುವಂಥಾದರೆ ಮಗುವಿಗೆ ಹುಲಿ ವೇಷ ಹಾಕಿಸಿ ದೇವಸ್ಥಾನದ ಅಂಗಳದಲ್ಲಿ ನೃತ್ಯ ಮಾಡಿಸುತ್ತೇನೆ ಎಂದು ಹರಕೆ ಹೊತ್ತು ಕೊಂಡಳಂತೆ. ಆಶ್ಚರ್ಯವೆಂಬಂತೆ ಮಗು ಸಂಪೂರ್ಣ ಗುಣಮುಖವಾಗುತ್ತದೆ. ಇಲ್ಲಿಂದ ಆರಂಭವಾದ ಹುಲಿವೇಷ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಅತ್ಯಂತ ಪ್ರಸಿದ್ಧಿ ಪಡೆಯುತ್ತದೆ.

ಕರಾವಳಿ ಭಾಗದಲ್ಲಿ ಹುಲಿ ವೇಷಗಳಿಗೂ ತುಳುನಾಡ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಅದರಲ್ಲೂ ಈ ಯುವಕ ಹುಲಿ ವೇಷಗಳನ್ನು ಹಾಕಿಕೊಂಡು ರಾಜ್ಯದಾದ್ಯಂತ ಅನೇಕ ತಾಲೀಮುಗಳನ್ನು ನೀಡುತ್ತಾ ಬಂದಿದ್ದಾನೆ. ಅವನ ಹೆಸರು ವಿತಿನ್. ಕಾರ್ಕಳ ತಾಲೂಕಿನ ನೀರೆಗುಡ್ಡೆ ಅಂಗಡಿಯ ಯುವಕ.

ವಿಶ್ವನಾಥ್ ಹಾಗೂ ಗುಲಾಬಿ ಅವರ ಪುತ್ರನಾಗಿದ್ದು ಇವನು ಸಣ್ಣ ವಯಸ್ಸಿನಿಂದಲೂ ಹುಲಿವೇಷ ಹಾಕುತ್ತಿದ್ದಾನೆ. ವಿಶ್ವನಾಥ್ ಹಾಗೂ ಗುಲಾಬಿ ಅವರ ಪುತ್ರನಾಗಿದ್ದು ಇವನು ಸಣ್ಣ ವಯಸ್ಸಿನಿಂದಲೂ ಹುಲಿವೇಷ ಹಾಕುತ್ತಿದ್ದಾನೆ.

ಅಣಿಯಾಗುವ ಬಗೆ : ಹುಲಿವೇಷವೆಂದರೆ ತುಳುನಾಡಿನಲ್ಲಿ ಅದಕ್ಕೆ ಮಹತ್ವವಿದೆ. ಕೃಷ್ಣಾಷ್ಟಮಿ, ದಸರ ಸಂದರ್ಭದಲ್ಲಿ ಹುಲಿ ವೇಷದ ಸಂದರ್ಭದಲ್ಲಿ ಹುಲಿ ಚಿರತೆ ಸಿಂಹದ ಮುಖವಾಡಗಳಿಗೆ ಪೂಜೆ ನೆರವೇರಿಸಲಾಗುತ್ತದೆ. ಊದು ಪೂಜೆ ನೆರವೇರಿಸಿದ ಬಳಿಕ ಬಣ್ಣ ಹಚ್ಚಲು ರೆಡಿಯಾಗುತ್ತಾರೆ. ಹುಲಿವೇಷ ಹಾಕುವವರು ಮಧ್ಯಪಾನ, ಮಾಂಸಹಾರ ಸೇವನೆ ಮಾಡುವಂತಿಲ್ಲ, ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದ್ದಾರೆ. ವಿತಿನ್ ಚಿಟ್ಟೆಪಿಲಿ, ಪಟ್ಟೆಪಿಲಿ, ಬಂಗಾಲಿ ಪಿಲಿ, ಕರಿಪಿಲಿ, ಗಳೆಂಬ
ಅಣಿಯಾಗುವ ಬಗೆ : ಹುಲಿವೇಷವೆಂದರೆ ತುಳುನಾಡಿನಲ್ಲಿ ಅದಕ್ಕೆ ಮಹತ್ವವಿದೆ. ಕೃಷ್ಣಾಷ್ಟಮಿ, ದಸರ ಸಂದರ್ಭದಲ್ಲಿ ಹುಲಿ ವೇಷದ ಸಂದರ್ಭದಲ್ಲಿ ಹುಲಿ ಚಿರತೆ ಸಿಂಹದ ಮುಖವಾಡಗಳಿಗೆ ಪೂಜೆ ನೆರವೇರಿಸಲಾಗುತ್ತದೆ. ಊದು ಪೂಜೆ ನೆರವೇರಿಸಿದ ಬಳಿಕ ಬಣ್ಣ ಹಚ್ಚಲು ರೆಡಿಯಾಗುತ್ತಾರೆ. ಹುಲಿವೇಷ ಹಾಕುವವರು ಮಧ್ಯಪಾನ, ಮಾಂಸಹಾರ ಸೇವನೆ ಮಾಡುವಂತಿಲ್ಲ, ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದ್ದಾರೆ. ವಿತಿನ್ ಚಿಟ್ಟೆಪಿಲಿ, ಪಟ್ಟೆಪಿಲಿ, ಬಂಗಾಲಿ ಪಿಲಿ, ಕರಿಪಿಲಿ, ಗಳೆಂಬ ವೇಷ ಗಳನ್ನು ತೊಟ್ಟು ಪ್ರದರ್ಶನ ನೀಡುತ್ತಾರೆ.

ರಾಜ್ಯದಾದ್ಯಂತ ಪ್ರದರ್ಶನ : ಸಾಮಾಜಿಕ ಜಾಲತಾಣಗಳು ಬಂದ ಬಳಿಕ ಹುಲಿವೇಷಕ್ಕೆ ಹೆಚ್ಚಿನ ಪ್ರೋತ್ಸಾಹಗಳು ಸಿಗುತ್ತಿವೆ. ಈ ಯುವಕ ದಾವಣಗೆರೆ, ಬೆಳಗಾವಿ, ಬಳ್ಳಾರಿ, ವಿಜಯನಗರ ಬೆಂಗಳೂರು ಸೇರಿದಂತೆ ಐದು ವರ್ಷಗಳ ಲ್ಳಿ 500 ಕ್ಕೂ ಪ್ರದರ್ಶನವನ್ನು ನೀಡಿದ್ದಾರೆ. ಮೆರವಣಿಗೆಗಳು, ಹಬ್ಬಗಳು ವಿಶೇಷ ಪ್ರದರ್ಶನಗಳನ್ನು ನೀಡುತ್ತಾರೆ.ಈ ನಾಲ್ಕು ತಿಂಗಳಲ್ಲಿ ರಾಜ್ಯದಾದ್ಯಂತ ಹುಲಿಕುಣಿತ ಹಾಗೂ ರಾಕ್ಷಸ , ಕೀಲುಕುದುರೆ ಸೇರಿದಂತೆ ಎಂಬತ್ತೇಳು ಕಾರ್ಯಕ್ರಮ ಗಳನ್ನು ನೀಡಿ ಜನರ ಮನಸೂರೆ ಗೊಳಿಸಿದ್ದಾನೆ .ಈ ಪಿಲಿಬಾಯ್

:ಉಡುಪಿ ಕೃಷ್ಣ ಮಠದಲ್ಲಿ ಆಕರ್ಷಕ ತಾಲೀಮು : ವಿಟ್ಲ ಪಿಂಡಿ ಸಂದರ್ಭದಲ್ಲಿ ಬಂಗಾಳಿ ಪಿಲಿ ವೇಶದಲ್ಲಿ ವೇಷ ಹಾಕುತ್ತಾರೆ. ಬೆಂಕಿ ಉಗುಳುವಿಕೆ, ಹಲ್ಲಿನಿಂದ ತೆಂಗಿನಕಾಯಿ ಸುಲಿ ಯುವಿಕೆ, ಭಾರ ಎತ್ತುವಿಗೆ ಸೇರಿದಂತೆ ವಿವಿಧ ಕಸರತ್ತುಗಳನ್ನು ನೀಡುತ್ತಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.