logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಪರ್ಯಾಯ ಮಹೋತ್ಸವ: ಉಡುಪಿಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ.

ಟ್ರೆಂಡಿಂಗ್
share whatsappshare facebookshare telegram
11 Jan 2024
post image

ಉಡುಪಿ, ಜ.11: ಜಿಲ್ಲೆಯ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಪರ್ಯಾಯ ಮಹೋತ್ಸವದ ಹಿನ್ನೆಲೆ, ಉಡುಪಿ ನಗರ ವ್ಯಾಪ್ತಿಯಲ್ಲಿ ಜನವರಿ 17 ಮತ್ತು 18 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದರಿಂದ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಹಿನ್ನಲೆ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮ 1989 ರ ನಿಯಮ 221 5(ಎ)ರ ಅನ್ವಯ ಈ ಕೆಳಕಂಡ ರಸ್ತೆಗಳಿಗೆ ಬದಲಿ ಮಾರ್ಗ ಹಾಗೂ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆದೇಶ ಹೊರಡಿಸಿರುತ್ತಾರೆ. ಜ.17 ರಂದು ಸಂಜೆ 4 ಗಂಟೆಯಿ೦ದ ಮಂಗಳೂರಿನಿ೦ದ ಉಡುಪಿ ಮತ್ತು ಮಣಿಪಾಲ ಕಡೆಗೆ ಹೋಗುವ ಎಲ್ಲಾ ಪ್ರೈವೇಟ್ ಬಸ್ಸುಗಳು ಸ್ವಾಗತಗೋಪುರ ರಸ್ತೆಯಲ್ಲಿ ಸಂಚಾರ ಮಾಡದೇ ರಾ.ಹೆ-66 ಮೂಲಕ ಕರಾವಳಿ ಜಂಕ್ಷನ್-ಬನ್ನ೦ಜೆ-ಶಿರಿಬೀಡು-ಸಿಟಿ ಬಸ್ಸು ನಿಲ್ದಾಣ–ಐರೋಡಿಕರ್-ಸರ್ವಿಸ್ ಬಸ್ಸು ನಿಲ್ದಾಣ- ಕಿದಿಯೂರು ಹೊಟೇಲ್ ಮೂಲಕ ಕೆಳಗೆ ಇಳಿದು ಶಿರಿಬೀಡು-ಬನ್ನಂಜೆ - ಕರಾವಳಿ ಜಂಕ್ಷನ್-ರಾ.ಹೆ 66 ಮೂಲಕ ಮಂಗಳೂರಿಗೆ ಸಂಚರಿಸಬೇಕು.

ಜ.17 ರಂದು ಸಂಜೆ 4 ಗಂಟೆಯಿAದ ಕುಂದಾಪುರ ಕಡೆಯಿಂದ ಉಡುಪಿಗೆ ಬರುವ ಎಲ್ಲಾ ಪ್ರೈವೇಟ್ ಬಸ್ಸುಗಳು ಸಂತೆಕಟ್ಟೆ- ಅ೦ಬಾಗಿಲು-ನಿಟ್ಟೂರು-ಕರಾವಳಿ ಜಂಕ್ಷನ್-ಬನ್ನ೦ಜೆ-ಶಿರಿಬೀಡು-ಸಿಟಿ ಬಸ್ಸು ನಿಲ್ದಾಣ-ಐರೋಡಿ ಸರ್ವಿಸ್ ಬಸ್ಸು ನಿಲ್ದಾಣ- ಕಿದಿಯೂರು ಹೋಟೆಲ್ ಮೂಲಕ ಕೆಳಗೆ ಇಳಿದು ಶಿರಿಬೀಡು- ಬನ್ನಂಜೆ –ಕರಾವಳಿ ಜಂಕ್ಷನ್ –ರಾ.ಹೆ. 66 ಮೂಲಕ ಕುಂದಾಪುರಕ್ಕೆ ಸಂಚರಿಸಬೇಕು. ಜ.17 ರಂದು ಸಂಜೆ 4 ಗಂಟೆಯಿ೦ದ ಕಾರ್ಕಳ, ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಎಲ್ಲಾ ಪ್ರೈವೇಟ್ ಬಸ್ಸುಗಳು ಇಂದ್ರಾಳಿ- ಎ೦.ಜಿ.ಎ೦-ಕಡಿಯಾಳಿ-ಕಲ್ಸ೦ಕ- ಉಡುಪಿ ಸಿಟಿ ಬಸ್ಸು ನಿಲ್ದಾಣಕ್ಕೆ ಬಂದು ಅಲ್ಲಿಂದ ತಿರುಗಿಸಿ ವಾಪಸು ಕಲ್ಸಂಕ –ಎಂ.ಜಿ.ಎ೦ –ಇಂದ್ರಾಳಿ ಮೂಲಕ ಮಣಿಪಾಲ, ಕಾರ್ಕಳ ಕಡೆಗೆ ಸಂಚಾರ ಮಾಡಬೇಕು. ಜ.17 ರಂದು ಸಂಜೆ 4 ಗಂಟೆಯಿ೦ದ ರಾಂಪುರ, ಕುಕ್ಕಿಕಟ್ಟೆ, ಮೂಡುಬೆಳ್ಳೆ ಕಡೆಯಿಂದ ಉಡುಪಿಗೆ ಬರುವ ಎಲ್ಲಾ ಪ್ರೈವೇಟ್ ಬಸ್ಸುಗಳು ಮಿಶನ್ ಕಂಪೌ೦ಡ್‌ನಿ೦ದ ಬಲಕ್ಕೆ ತಿರುಗಿ ಅಮ್ಮಣ್ಣಿ ರಾಮಣ್ಣ- ಚಿಟ್ಪಾಡಿ ಜಂಕ್ಷನ್‌ನಿ೦ದ ಎಡಕ್ಕೆ ತಿರುಗಿ-ಬೀಡಿನಗುಡ್ಡೆ ಜಂಕ್ಷನ್-ಶಾರದ ಕಲ್ಯಾಣ ಮಂಟಪ ಜಂಕ್ಷನ್ ಎಡಕ್ಕೆ ತಿರುಗಿ-ಕಲ್ಸಂಕ-ಸಿ.ಟಿ ಬಸ್ಸು ನಿಲ್ದಾಣ ಐರೋಡಿಕರ್-ಸಿಟಿ ಬಸ್ಸು ನಿಲ್ದಾಣಕ್ಕೆ ಬಂದು ನಂತರ ಅದೇ ರಸ್ತೆ ಮಾರ್ಗವಾಗಿ ವಾಪಸು ಸಂಚರಿಸಬೇಕು. ಜ.17 ರಂದು ಸಂಜೆ 4 ಗಂಟೆಯಿ೦ದ ಮಲ್ಪೆ ಕಡೆಯಿಂದ ಉಡುಪಿಗೆ ಬರುವಂತಹ ಖಾಸಗಿ ಬಸ್ಸುಗಳು ಆದಿಉಡುಪಿ-ಕರಾವಳಿ ಜಂಕ್ಷನ್ -ಬನ್ನಂಜೆ-ಶಿರಿಬೀಡು-ಐರೋಡಿಕರ್-ಸಿಟಿ ಬಸ್ಸು ನಿಲ್ದಾಣಕ್ಕೆ ಬಂದು ವಾಪಸು ಶಿರಿಬೀಡು-ಬನ್ನಂಜೆ ಕರಾವಳಿ ಜಂಕ್ಷನ್ –ಆದಿಉಡುಪಿ ಮಾರ್ಗವಾಗಿ ಮಲ್ಪೆ ಕಡೆಗೆ ವಾಪಾಸು ಸಂಚರಿಸಬೇಕು.

ಜ.17 ರಂದು ಬುಕ್ಕಿಂಗ್ ಏಜೆಂಟ್ ಮತ್ತು ಬಸ್ ಕಂಪನಿಯವರು ರಾತ್ರಿ ಉಡುಪಿ ಸಿಟಿ ಒಳಗೆ ಪ್ರವೇಶ ಮಾಡದೇ ಕರಾವಳಿ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿ, ಇಳಿಸಬೇಕು. ಜ.17 ರಂದು ಸಂಜೆ 6 ಗಂಟೆಯಿ೦ದ ಜ.18 ರ ಬೆಳಗ್ಗೆ 6 ಗಂಟೆಯ ವರೆಗೆ ಸ್ವಾಗತ ಗೋಪುರ, ಕಿನ್ನಿಮೂಲ್ಕಿ, ಗೋವಿಂದ ಕಲ್ಯಾಣ ಮಂಟಪ, ಜೋಡುಕಟ್ಟೆ, ಟಿ.ಎಂ.ಎ.ಪೈ ಆಸ್ಪತ್ರೆ, ಲಯನ್ಸ್ ಸರ್ಕಲ್, ಹಳೇ ಡಯಾನ ಸರ್ಕಲ್, ಮಿತ್ರ ಜಂಕ್ಷನ್, ತೆಂಕಪೇಟೆ, ರಥಬೀದಿ ರಸ್ತೆಯಲ್ಲಿ ಅಕ್ಕಪಕ್ಕ ವಾಹನ ಸಂಚಾರ ಮತ್ತು ಪಾರ್ಕಿಂಗ್ ನಿಷೇಧಿಸಲಾಗಿರುತ್ತದೆ. ಕಲ್ಸಂಕ ಜಂಕ್ಷನ್‌ನಿ೦ದ ವಿದ್ಯೋದ್ಯಯ ಶಾಲೆಯವರೆಗೆ ರಸ್ತೆಯ ಬದಿಯ ಪಾರ್ಕಿಂಗ್ ನಿಷೇಧಿಸಲಾಗಿರುತ್ತದೆ. ಜ.17 ರಂದು ಸಂಜೆ 6 ಗಂಟೆಯಿAದ ಜ.18 ರ ಬೆಳಗ್ಗೆ 6 ಗಂಟೆಯ ವರೆಗೆ ನಾಗಬನಕ್ರಾಸ್ ನಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಕುಂಜೂರು ಎಲೆಕ್ಟ್ರಿಕಲ್ಸ್ ನಿಂದ ಗೀತಾಂಜಲಿ ರಸ್ತೆಯವರೆಗೆ, ಸರ್ವಿಸ್ ಬಸ್ಸು ನಿಲ್ದಾಣದ ಪೊಲೀಸ್ ಔಟ್ ಪೋಸ್ಟ್ನಿಂದ ಕವಿ ಮುದ್ದಣ್ಣ ರಸ್ತೆಯವರೆಗೆ, ವಿಷ್ಣು ಫ್ಲವರ್ ಸ್ಟಾಲ್‌ನಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಭಾಸ್ಕರ ವಿಹಾರ್ ರಸ್ತೆಯಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಕಲ್ಸಂಕದಿ೦ದ ಬಡಗುಪೇಟೆ ರಸ್ತೆಯವರೆಗೆ, ಸೌತ್ ಶಾಲೆಯ ಬಳಿ ವೆಂಕಟರಮಣ ದೇವಸ್ಥಾನಕ್ಕೆ ಹೋಗುವ ರಸ್ತೆಯವರೆಗೆ, ಜೋಡುಕಟ್ಟೆಯಿಂದ ಬ್ರಹ್ಮಗಿರಿಗೆ ಹೋಗುವ ರಸ್ತೆಯ ಬೇತಲ್ ಚರ್ಚ್ ಬಳಿ, ಎಲ್.ಐ.ಸಿ ರಸ್ತೆಯ ಸಿಂಡಿಕೇಟ್ ಟವರ್ ಬಳಿ, ಅಲಂಕಾರ್ ಟಾಕೀಸ್ ರಸ್ತೆಯ ಬಳಿ, ಮಿಷನ್ ಆಸ್ಪತ್ರೆಯಿಂದ ಲಯನ್ಸ್ ಸರ್ಕಲ್ ಬರುವ ರಸ್ತೆಯಲ್ಲಿ ಮಿಷನ್ ಆಸ್ಪತ್ರೆ ಎದುರು, ಅಮ್ಮಣ್ಣಿ ರಾಮಣ್ಣ ಹಾಲ್ ಎದುರಿನ ಪಿಪಿಸಿ ಕಾಲೇಜ್‌ಗೆ ಹೋಗುವ ರಸ್ತೆಯ ಅಮ್ಮಣ್ಣಿ ರಾಮಣ್ಣ ಹಾಲ್ ಎದುರು, ತ್ರಿನಿಟಿ ಐಟಿಐ ಕಾಲೇಜಿನ ಎದುರಿನಿಂದ ಸೌತ್ ಶಾಲೆಗೆ ಹೋಗುವ ರಸ್ತೆಯ, ತ್ರಿನಿಟಿ ಕಾಲೇಜ್ ಎದುರು, ಹಾಗೂ ಬೀಡಿನಗುಡ್ಡೆಯಿಂದ ವೆಂಕಟರಮಣ ದೇವಸ್ಥಾನಕ್ಕೆ ಬರುವ ರಸ್ತೆಯ ಬೀಡಿನಗುಡ್ಡೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.