logo
WhatsApp Image 2026-04-02 at 14.46.04.jpeg
hindalco everlast.jpeg

ಅಮವಾಸೆಬೈಲ್ :ಹಬ್ಬಿನಾಲೆಯಲ್ಲಿ ಮನೆಯ ಕೆಲಸದ ಒತ್ತಡದಿಂದ ಬೇಸತ್ತ ಮಹಿಳೆ ನೇಣಿಗೆ ಶರಣು

ಟ್ರೆಂಡಿಂಗ್
share whatsappshare facebookshare telegram
20 Aug 2022
post image

ಅಮಾವಾಸೆಬೈಲ್;

ಮನೆಯ ಕೆಲಸದ ಒತ್ತಡ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೋರ್ವರು ಮನೆಯ ಕೊಟ್ಟಿಗೆಯ ಜಂತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಮಡಾಮಕ್ಕಿ‌ ಗ್ರಾಮದ ಹಬ್ಬಿನಾಲೆ ಎಂಬಲ್ಲಿ‌ ಆ.19ರಂದು ನಡೆದಿದೆ. ಮಡಾಮಕ್ಕಿ ಗ್ರಾಮದ ಹಬ್ಬಿನಾಲೆ ನಿವಾಸಿ 42 ವರ್ಷದ ಸುಮತಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರ ಗಂಡ ಬಳ್ಳಾರಿಯಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದಾರೆ. ಹೀಗಾಗಿ ಮನೆಯಲ್ಲಿ ಕೃಷಿ ಗದ್ದೆ, ಜಾನುವಾರು ಇದ್ದು, ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಸುಮತಿಯವರೇ ಮಾಡುತ್ತಿದ್ದರು. ಅಲ್ಲದೆ, ಗೇರು ಬೀಜ ಕಟ್ಟಿಂಗ್ ಮಾಡುವ ಕೆಲಸವನ್ನು ಕೂಡ ಮಾಡುತ್ತಿದ್ದರು. ಕೆಲಸ ಒತ್ತಡದಿಂದ ಅನಾರೋಗ್ಯಕ್ಕೀಡಾಗಿದ್ದರು. ಇದೇ ಕಾರಣದಿಂದ ಜೀವನದಲ್ಲಿ ಮನನೊಂದು ನಿನ್ನೆ ಮನೆಯ ಬಳಿಯ ಕೊಟ್ಟಿಗೆಯಲ್ಲಿ‌ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.