



ಹೈದರಾಬಾದ್: ತೈಲದಿಂದ -ಟೆಲಿಕಾಂವರೆಗೆ ಉದ್ಯಮ ವಿಸ್ತರಿಸಿರುವ ಕೋಟ್ಯಧಿಪತಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಆಂಧ್ರಪ್ರದೇಶದಲ್ಲಿ 10 ಗಿಗಾವ್ಯಾಟ್‌ನ ಸೋಲಾರ್ ಘಟಕವನ್ನು ನಿರ್ಮಿಸುವುದಾಗಿ ಘೋಷಿಸಿದೆ. ಅಲ್ಲದೇ, ರಾಜ್ಯದಲ್ಲಿ ಅಲ್ಟ್ರಾ ಹೈ ಸ್ಪೀಡ್ 5ಜಿ ನೆಟÌರ್ಕ್ ಸ್ಥಾಪನೆಗಾಗಿ 40 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದೆ. ಆಂಧ್ರಪ್ರದೇಶದ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಈ ಕುರಿತು ಮಾತನಾಡಿದ ಅಂಬಾನಿ, ನವೀಕರಿಸಬಹುದಾದ ಸಂಪನ್ಮೂಲಗಳ ಮೂಲಕ ಕಾರ್ಬನ್ ಮುಕ್ತ ಗ್ರೀನ್ ಹೈಡ್ರೋಜನ್ ಉತ್ಪಾದಿಸುವ ಉದ್ದೇಶ ನಾವು ಹೊಂದಿದ್ದೇವೆ. ಅಲ್ಲದೇ, 2030ರ ವೇಳೆಗೆ ನವೀಕರಿಸಬಹುದಾದ ಸಂಪನ್ಮೂಲಗಳ ಮೂಲಕವೇ 100 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಹೊಂದಿದ್ದೇವೆ. ಅದಕ್ಕೆ ಪೂರಕವಾಗಿಆಂಧ್ರಪ್ರದೇಶದಲ್ಲಿ 10 ಗಿಗಾವ್ಯಾಟ್ ಸೋಲಾರ್ ಘಟಕ ನಿರ್ಮಾಣಕ್ಕೆ ಹೂಡಿಕೆ ಮಾಡಲು ಯೋಜಿಸಿದ್ದೇವೆ ಎಂದಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.