



ಬೆಂಗಳೂರು: ಅಮೆರಿಕದಲ್ಲಿ ನೆಲೆಸಿರುವ ಕನ್ನಡತಿ, 63 ವರ್ಷದ ಡಾ. ಸ್ವರ್ಣಾಂಬಾ ಲೋಕೇಶ್ ಅವರು ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತ ಕಿಲಿಮಂಜಾರೊ ಏರಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ವೃತ್ತಿಯಲ್ಲಿ ವೈದ್ಯೆಯಾಗಿರುವ ಸ್ವರ್ಣಾಂಬಾ ಅವರು ಮೈಸೂರು ಮೆಡಿಕಲ್ ಕಾಲೇಜಿನ ಹಳೆವಿದ್ಯಾರ್ಥಿನಿ. ಹಾಸನ ಜಿಲ್ಲೆ ಗೊರೂರು ಸಮೀಪದ ಹೆಬ್ಬಾಳೆಯಲ್ಲಿ ಜನಿಸಿದ ಇವರು, ಮಂಡ್ಯದ ಸೊಸೆ.
ಅಮೆರಿಕದ ಫ್ಲಾರಿಡಾದಲ್ಲಿ ವೆಟರನ್ಸ್ ಅಡ್ಮಿನಿಷ್ಟ್ರೇಷನ್ ನಲ್ಲಿ ಪ್ರೈಮರಿ ಕೇರ್/ ಇಂಟರ್ ನಲ್ ಮೆಡಿಸಿನ್ ಫಿಸೀಷಿಯನ್ ಆಗಿ 20 ವರ್ಷ ಸೇವೆ ಸಲ್ಲಿಸಿದ್ದ ಡಾ.ಸ್ವರ್ಣಾಂಬಾ ಕನ್ನಡವನ್ನು ಎಂದೂ ಮರೆಯದ, ಅಮೆರಿಕದಲ್ಲೂ ಕನ್ನಡ ಭಾಷೆ, ಸಂಸ್ಕೃತಿಯನ್ನು ಪಸರಿಸಲು ಬಹಳಷ್ಟು ಶ್ರಮಿಸಿದ ಸಾಧಕಿ. ನಿವೃತ್ತಿಯ ಬಳಿಕ ಏನಾದರೊಂದು ಸಾಧನೆ ಮಾಡಬೇಕು ಎಂಬ ಛಲದೊಂದಿಗೆ ಅವರು ಕಿಲಿಮಂಜಾರೊ ಪರ್ವತ ಏರಿದ್ದಾರೆ.
ಜುಲೈ 11ರಿಂದ 18ರ ನಡುವೆ ಚಾರಣ ಕೈಗೊಂಡು, ಯಶಸ್ವಿಯಾಗಿ ಮುಗಿಸಿದ್ದಾರೆ. ಫಿಟ್ನೆಸ್ ಕಾಯ್ದುಕೊಂಡರೆ 60 ವರ್ಷದ ಬಳಿಕವೂ ಪರ್ವತಾರೋಹಣ ಕಷ್ಟವಲ್ಲ, ಆಮ್ಲಜನಕದ ಕೊರತೆಯೂ ಅಷ್ಟಾಗಿ ಕಾಡದು ಎಂಬ ಮಹತ್ವದ ಸಂದೇಶವನ್ನು ಅವರು ಸಾರಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.