



ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಏರುತ್ತಿರುವ ಸಮಯದಲ್ಲೇ ನಂದಿನಿ ಹೈನು ಉತ್ಪನ್ನಗಳಿಗೆ ಪೈಪೋಟಿ ನೀಡಲು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಅಮುಲ್ ಸಿದ್ಧತೆ ನಡೆಸಿದೆ.
ಅಮುಲ್‌ನ (Amul) ಹಾಲು, ಮೊಸರು ಪೊಟ್ಟಣಗಳು ರಾಜ್ಯ ರಾಜಧಾನಿ ಬೆಂಗಳೂರಿನ ಮಾರುಕಟ್ಟೆ ಪ್ರವೇಶಿಸಲು ಸಜ್ಕಾಗುತ್ತಿವೆ.
ಟ್ವೀಟ್ ಮೂಲಕ ಅಮುಲ್ ಈ ಮಾಹಿತಿ ನೀಡಿದ್ದು, ಕೆಂಗೇರಿಯಿಂದ ವೈಟ್ಫೀಲ್ಡ್‌ವರೆಗೆ ಅಮುಲ್ ಉತ್ಪನ್ನಗಳು ಲಭ್ಯವಾಗಲಿವೆ ಎಂಬ ಅರ್ಥ ಬರುವ ಪೋಸ್ಟರ್‌ವೊಂದನ್ನು ಹಂಚಿಕೊಂಡಿದೆ.
‘ಹಾಲು ಮತ್ತು ಮೊಸರಿನ ತಾಜಾತನದ ಹೊಸ ಅಲೆ ಬೆಂಗಳೂರಿಗೆ ಬರುತ್ತಿದೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ದೊರೆಯಲಿದೆ’ ಎಂದು #LaunchAlert ಹ್ಯಾಷ್ಟ್ಯಾಗ್‌ನೊಂದಿಗೆ ಅಮುಲ್ ಟ್ವೀಟ್ ಉಲ್ಲೇಖಿಸಿದೆ. ಆದರೆ, ಅಮುಲ್ ಹಾಲು, ಮೊಸರಿನ ದರ ಎಷ್ಟಿರಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಅಮುಲ್ ಹಾಗೂ ಕೆಎಂಎಫ್ ವಿಲೀನಕ್ಕೆ ಸಂಬಂಧಿಸಿ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೃಷ್ಟಿಸಿದ್ದ ವಿವಾದ ಈಗ ಮತ್ತೆ ಜೀವ ಪಡೆಯುವ ಸಾಧ್ಯತೆಯಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.