



ಅಮೆರಿಕ: ಇಲ್ಲೊಬ್ಬರು 80 ವರ್ಷ ವಯಸ್ಸಿನ ಅಜ್ಜಿ 203 ಯುನಿಟ್ ರಕ್ತದಾನ ಮಾಡಿ ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.
ಜೋಸೆಫೀನ್ 1965ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ರಕ್ತದಾನ ಮಾಡಲು ಪ್ರಾರಂಭಿಸಿದರು. ಅಂದಿನಿಂದ, ಅವರು ಅಸಂಖ್ಯಾತ ಜನರ ಜೀವಗಳನ್ನು ಉಳಿಸಲು ಒಟ್ಟು 203 ಘಟಕಗಳನ್ನು ದಾನ ಮಾಡಿದರು. 80 ವರ್ಷದ ಜೋಸೆಫೀನ್ ಮಿಚಾಲುಕ್ ಎಂಬ ವೃದ್ಧೆ ತನ್ನ ಜೀವಮಾನವಿಡೀ ರಕ್ತದಾನ ಮಾಡುತ್ತಲೇ ಬಂದಿದ್ದಾರೆ.
ಬಹಳಷ್ಟು ಜನರು ರಕ್ತದ ಕೊರತೆಯನ್ನು ಎದುರಿಸುತ್ತಿದ್ದಾರೆ. ಗರ್ಭಧಾರಣೆ, ಹೆರಿಗೆ, ಅಪಘಾತ, ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳು ಸೇರಿದಂತೆ ನಾನಾ ಸಂದರ್ಭಗಳಲ್ಲಿ ಬಹಳಷ್ಟು ಮಂದಿಗೆ ರಕ್ತ ಬಹಳ ಅತ್ಯಗತ್ಯವಾಗಿದೆ. ಆದರೆ ಇಂದು ಅಗತ್ಯ ಇರುವ ಎಲ್ಲರಿಗೂ ರಕ್ತ ದೊರೆಯುತ್ತಿಲ್ಲ. ರಕ್ತ ನೀಡಲು ನನ್ನಲ್ಲಿ ಇದೆ ಎಂದು ನಾನು ಭಾವಿಸುತ್ತೇನೆ. ಅಗತ್ಯವಿರುವ ಜನರಿಗೆ ನಾನು ಅದನ್ನು ನೀಡಲು ಬಯಸುತ್ತೇನೆ’ ಎಂದು O+ ಬ್ಲಡ್ ಗ್ರೂಪ್‌ನ ಜೋಸೆಫೀನ್ ಗಿನ್ನೆಸ್ ವಿಶ್ವ ದಾಖಲೆಗಳಿಗೆ ತಿಳಿಸಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.