logo
WhatsApp Image 2026-04-02 at 14.46.04.jpeg
hindalco everlast.jpeg

ಕಾಲ್ತೋಡು ಗ್ರಾಮದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನದ ಸರ ಕದ್ದು ಪರಾರಿಯಾದ ಮೇಸ್ತ್ರಿ

ಟ್ರೆಂಡಿಂಗ್
share whatsappshare facebookshare telegram
18 Feb 2023
post image

ಕುಂದಾಪುರ:

ಮನೆಗೆ ಬಂದ ಪರಿಚಿತ ವ್ಯಕ್ತಿ ಕೋಣೆಯ ಪೆಟ್ಟಿಗೆಯಲ್ಲಿ ಇಟ್ಟಿದ್ದ ಕರಿಮಣಿಸರವನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಬೈಂದೂರಿನ ಕಾಲ್ತೋಡು ಗ್ರಾಮದ ಯಡೇರಿ ಗುರಮಕ್ಕಿ ಎಂಬಲ್ಲಿ ನಡೆದಿದೆ. ಕಾಲ್ತೋಡು ಗ್ರಾಮದ ಸುರೇಂದ್ರ ಪೂಜಾರಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ಸುಮಾರು 3 ತಿಂಗಳ ಹಿಂದೆ ಮಹಾಂತೇಶ್ ಎಂಬಾತನನ್ನು ಮನೆಯ ಮೇಲ್ಮಾವಣಿಯ ಅಡ್ಡಗೋಡೆ ಕಟ್ಟಲು ಮತ್ತು ಗಾರೆ ಕೆಲಸ ಮಾಡಲು ಮನೆಗೆ ಕರೆಯಿಸಿಕೊಂಡಿದ್ದರು. ಮನೆ ಕೆಲಸ ಮುಗಿದ ಬಳಿಕ ಹಣ ನೀಡಿ ಕಳುಹಿಸಿದ್ದರು. ಆದರೆ ಮತ್ತೆ ಮನೆಗೆ ಬಂದ ಮಹಾಂತೇಶನು ಸುರೇಂದ್ರ ಅವರ ತಂಗಿಯ ಕೋಣೆಯ ಪೆಟ್ಟಿಗೆಯಲ್ಲಿಟ್ಟಿದ್ದ 1,20 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿದ್ದಾನೆ ಎಂದು ಸುರೇಂದ್ರ ಪೂಜಾರಿ ದೂರಿದ್ದಾರೆ. ಅದರಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.