logo
WhatsApp Image 2026-04-02 at 14.46.04.jpeg
hindalco everlast.jpeg

ಕಲ್ಲುಗಳಿಂದ ನಿರ್ಮಿಸಲಾದ ಗಾಂಧಿಜಿಯ ಚಿತ್ರ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗುತಿದ್ದು ಆತನ ಕಲೆಗೆ ಭೇಷ್ ಎನ್ನುತಿದ್ದಾರೆ ಜನ.

ಟ್ರೆಂಡಿಂಗ್
share whatsappshare facebookshare telegram
2 Oct 2021
post image

ಕಾರ್ಕಳ: ಈ ಚಿತ್ರ ಕಲಾವಿದನ ಕುಂಚದಲ್ಲಿ ಅರಳಿದ ಚಿತ್ರಗಳನ್ನು ನೋಡ್ತಾ ಇದ್ರೆ ನೀವು ಮೈಮರೆತು ಬಿಡುತ್ತೀರಿ, ಈ ಕಲಾವಿದನ ಜಾಣ್ಮೆ ಯಿಂದ ಅರಳುವ ಚಿತ್ರ ಬಲು ಚಂದವೋ ಚಂದ. ಇಂತಹ ಬೆರಗಿನ ಚಿತ್ರ ಬಿಡಿಸುವ ದೇಶಿ ಕಲೆಯ ಅಪ್ಪಟ ಕಲಾಕಾರನೇ ಸಂತೋಷ್ ಮಾಳ.

ಕಲ್ಲುಗಳಿಂದ ನಿರ್ಮಿಸಲಾದ ಗಾಂಧಿಜಿಯ ಚಿತ್ರ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗುತಿದ್ದು ಆತನ ಕಲೆಗೆ ಭೇಷ್ ಎನ್ನುತಿದ್ದಾರೆ ಜನ.

ಸಂತೋಷ್ ಮೂಲತಃ ಕಾರ್ಕಳ ತಾಲೂಕಿನ ಮಾಳ ಗ್ರಾಮದವರು. ವೃತ್ತಿಯ ಜೊತೆಗೆ ಇವರಿಗೆ ಚಿತ್ರವೂ , ಒಂದು ಚಂದದ ಹವ್ಯಾಸ. ತುಳುನಾಡಿನ ಯಕ್ಷಗಾನ, ಜನಪದ, ಗ್ರಾಮೀಣ ಸೊಗಡಿನ ಚಿತ್ರಗಳು ಇವರ ಕುಂಚದಲ್ಲಿ ಅರಳಿದೆ. ಆ ಎಲ್ಲಾ ಚಿತ್ರಗಳು ಅವರ ಪ್ರತಿಭೆಯನ್ನು ಇನ್ನಷ್ಟು ಸೃಜನಶೀಲವಾಗಿಸಿವೆ. ಹೂವುಗಳಲ್ಲಿ ಅರಳಿದ ಕಲಾಕೃತಿ,ಮಣ್ಣಿನ ಆಕೃತಿಗಳು, ವೆಸ್ಟ್ ಪೇಪರ್ಗಳಿಂದ ಹೊಸಹೊಸ ಕಲಾಕೃತಿ ಗಳನ್ನು ಸೃಷ್ಟಿಸುತ್ತಿದ್ದಾರೆ , ಚಿತ್ರಗಳ ಕ್ರಾಫ್ಟ್ ಆಕೃತಿ ಗಳಿಗೆ ಹೊಸ ಆಯಾಮ ನೀಡಬೇಕು ಎನ್ನುವ ಆಶಯ ನನ್ನದಾಗಿದೆ ಎನ್ನುತ್ತಾರೆ ಸಂತೋಷ್

ಮಾನವೀಯ ನೆಲೆಗಟ್ಟಿನ ಮೇಲೆ ಬಿಂಬಿತವಾಗಿರುವ ಇವರು ಬಿಡಿಸಿದ ಚಿತ್ರಗಳಲ್ಲಿ ತಾತ್ವಿಕತೆ, ಶ್ರೀಮಂತ ಭಾವನೆಗಳೆಲ್ಲಾ ಒಡಮೂಡಿದೆ. ಇಪ್ಪತ್ತೈದಕ್ಕೂ ಹೆಚ್ಚು ರಾಜ್ಯ ಮಟ್ಟದ ಕಲಾ ಪ್ರದರ್ಶನದಲ್ಲಿ ಇವರ ಚಿತ್ರಗಳು ಗಮನ ಸೆಳೆದಿವೆ.

ಅಂತರರಾಷ್ಟ್ರೀಯ ಮಟ್ಟದ ಬಾಬುರಾವ್ ಪೈಂಟರ್ ವರ್ಚುವಲ್ ವೇದಿಕೆಯಲ್ಲಿ ಇವರ ಚಿತ್ರಗಳು ಪ್ರಕಟಗೊಂಡಿದ್ದವು 18 ಕ್ಕೂ ಹೆಚ್ಚು ರಾಜ್ಯದಾದ್ಯಂತ ತಮ್ಮ ಚಿತ್ರಗಳ ಕಲಾಪ್ರದರ್ಶನ ನೀಡಿದ್ದಾರೆ, 60 ಕ್ಕೂ ಹೆಚ್ಚು ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

ಕಲೆಯ ಪಾಠನೂ ಮಾಡ್ತಾರೆ:

ಸಂತೋಷ್ ಬರೀ ತಾವು ಮಾತ್ರ ಮಿಂಚುತ್ತಿಲ್ಲ. ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಾ ಶಿಕ್ಷಣ ನೀಡಿ ಅದೆಷ್ಟೋ ಕಲಾ ಪ್ರೇಮಿಗಳಿಗೆ ಅವಕಾಶ ಬಾಗಿಲು ತೆರೆದಿಟ್ಟಿದ್ದಾರೆ. ಈಗ ಕಾರ್ಕಳ ತಾಲೂಕಿನ ಕಾಂತಾವರ ಪ್ರಕೃತಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ

--- ರಾಂ ಅಜೆಕಾರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.