



ಶ್ವೇತಾ ಕೆರುವಾಶೆ ಜರ್ನಲಿಸಂ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ :
ಕೆರುವಾಶೆ : ಯಕ್ಷಗಾನ ಎನ್ನುವುದು ಹಾಡುಗಾರಿಕೆ ನೃತ್ಯ ವೇಷಭೂಷಣ ಮಾತುಗಾರಿಕೆಗಳನ್ನು ಒಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರಿಯ ಕಲೆಯಾಗಿದೆ ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು.ಹಾಗೆಯೇ ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನದಲ್ಲಿ ಮದ್ದಳೆಗೆ ಪ್ರಮುಖ್ಯತೆ ಇದೆ. ಖ್ಯಾತ ಮದ್ದಳೆ ವಾದಕರಲ್ಲಿ ಕೆರುವಾಶೆ ಗ್ರಾಮದ ಆನಂದ ಗುಡಿಗಾರ್ ಮೇಲುಸ್ಥರದಲ್ಲಿ ಕಾಣಿಸುತ್ತಾರೆ.
ವೃತ್ತಿ ಜೀವನ : ಆನಂದಗುಡಿಗಾರ್ ರವರು ತಮ್ಮ ವೃತ್ತಿ ಬದುಕನ್ನು ಸತತ 29 ವರ್ಷಗಳ ಕಾಲ ಯಕ್ಷಗಾನದಲ್ಲಿ ತೊಡಗಿಸಿಕೊಂಡವರು .ಕರ್ನಾಟಕದ ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಶಿವಮೊಗ್ಗ ಸೇರಿದಂತೆ ಹಲವಾರು ಭಾಗಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದಾರೆ, ವಾರ್ಷಿಕ ವಾಗಿ 700 ಕ್ಕೂ ಹೆಚ್ಚು ಜನರಿಗೆ ಮದ್ದಳೆಯನ್ನು ಕಲಿಸುತ್ತಾರೆ. ಇವರ ಶಿಷ್ಯ ವರ್ಗವೆ ಹೆಚ್ಚು. ಜೊತೆ ಜೊತೆಗೆ ಯಕ್ಷಗಾನ ತರಬೇತಿಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದಾರೆ.
ಇವರ ಸಲ್ಲಿಸಿದ ಯಕ್ಷ ಸೇವೆಗಳು : ಆಕಾಶವಾಣಿ ದೂರದರ್ಶನ, ಮೈಸೂರ್ ದಸರಾ, ಮುಂಬೈ, ಚೆನ್ನೈ, ಕೊಯಮಾತ್ತೂರ್, ಅಲ್ಲದೇ ಕೊಲ್ಲಿ ರಾಷ್ಟ್ರ ಮಸ್ಕತ್ ಗೂ ಹೋಗುವ ಭಾಗ್ಯ ನನಗೆ ದೊರೆತಿದೆ ಹಾಗೆಯೇ ಇವರು ಈಗ ಹಿರಿಯಡ್ಕ ಮೇಳ. ಕರ್ನಾಟಕದ ದಕ್ಷಿಣ ಕನ್ನಡ ಉಡುಪಿ ಉತ್ತರಕನ್ನಡ ಶಿವಮೊಗ್ಗ.ಮತ್ತು 10 ಮೇಳದಲ್ಲಿ 29 ವರ್ಷಕಾಲ ಯಕ್ಷಗಾನಕ್ಕೆ ಸೇವೆಯನ್ನು ನೀಡಿದ್ದಾರೆ. ಚೆಂಡೆಗು ಸೈ: ಮದ್ದಳೆ ವಾದಕರಾಗಿ ಗುರುತಿಸಿಕೊಂಡಿರುವ ಆನಂದ ಗುಡಿಗಾರ್ ಚೆಂಡೆ ವಾದನದಲ್ಲು ಕೂಡ ಎತ್ತಿದ ಕೈ . ಯಕ್ಷಗಾನ ಗಳಲ್ಲಿ ಕೆಲವು ಸಂದರ್ಭಗಳಲ್ಲಿ ಚೆಂಡೆ ವಾದನವನ್ನು ಮಾಡಿ ನೆರೆದಿರುವ ಪ್ರೇಕ್ಷಕರನ್ನು ಆಕರ್ಷಿಸುತ್ತಾರೆ
ಯಕ್ಷಗಾನದಲ್ಲಿ ಖುಷಿ ಕೊಟ್ಟ ವಿಷಯ : ಮಕ್ಕಳನ್ನು ಮತ್ತು ಕಲಾವಿದರನ್ನು ರಂಗದಲ್ಲಿ ಹುರಿದುಂಬಿಸಿ ಕುಣಿಸುವುದು ಖುಷಿ ಮುಖ್ಯವಾಗಿ ನನ್ನ ಶ್ರೇಯಸ್ಸಿಗೆ ಮನೆಯವರ ಪ್ರೋತ್ಸಾಹವೆ ಕಾರಣ ಮಕ್ಕಳಿಗೂ ಮಡದಿಗೂ ತುಂಬಾ ಹೆಮ್ಮೆ.ನಾವು ದುಡಿಯುವ ಕೆಲಸಕ್ಕಿಂತಲೂ, ಮಕ್ಕಳಿಗೆ, ದೊಡ್ಡವರಿಗೆ ಕಲಿಸಿ ಅವರನ್ನು ವೇದಿಕೆಯಲ್ಲಿ ಕಾಣುವ ತೃಪ್ತಿಯೇ ಹೆಚ್ಚು ಸಂತೋಷ ಕೊಡುತ್ತದೆ.ಸತತ ಸಾಧನೆ ಮತ್ತು ಪರಿಶ್ರಮದಿಂದ ಅಭ್ಯಾಸ ಮಾಡಿದ ಫಲವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಉತ್ತಮ ಕೀರ್ತಿ, ಬಿರುದು, ಸನ್ಮಾನ, ಹೆಸರು ಹೆಚ್ಚಿನ ಸಂತೋಷವನ್ನುಂಟು ಮಾಡಿದೆ ಎನ್ನುತ್ತಾರೆ ಗುಡಿಗಾರ್.
ಯಕ್ಷಗಾನ ವೃತ್ತಿಯಲ್ಲಿ ಪಡೆದ ಅನುಭವ :ಎಷ್ಟೇ ಚಿಂತೆ ಇದ್ದರು ಯಕ್ಷಗಾನದಲ್ಲಿ ಇರುವ ಸಮಯ ಅದನ್ನೆಲ್ಲ ಮರೆತು ಹಸನ್ಮುಖಿ ಯಾಗಿ ಕೆಲಸ ಮಾಡಿದ ಪರಿಣಾಮ ಬೇರೆ ಯಾವ ಕ್ಷೇತ್ರದಲ್ಲೂ ಅಗದಷ್ಟು ಜನರ ಪ್ರೀತಿ ಅಭಿಮಾನ ಪಡೆದದ್ದೇ ದೊಡ್ಡ ಅನುಭವವಾಗಿದೆ ಎಂದು ನಗುತ್ತಾ ಉತ್ತರಿಸುತ್ತಾರೆ
ಇವರಿಗೆ ಸಂದ ಗೌರವ ಪ್ರಶಸ್ತಿಗಳು : ಇವರ ಈ ಯಕ್ಷಪಯಣದಲ್ಲಿ ಇವರಿಗೆ ಚೆಂಡೆ ಮಾಂತ್ರಿಕ, ಯಕ್ಷಗಾನ ಗುರು, ಉತ್ತಮ ಯಕ್ಷಶಿಕ್ಷಕ, ಮದ್ದಳೆ ಮೋಡಿಗಾರ, ಪಟ್ಲ ಫೌಂಡೇಶನ್ ನ ಪ್ರಶಸ್ತಿ ಸೇರಿದಂತೆ ದೇಶ ವಿದೇಶಗಳಲ್ಲಿ ಪ್ರಶಸ್ತಿಗಳು ಗೌರವಗಳು ದೊರೆತಿವೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.