



ಅನುಷಾ ಜರ್ನಲಿಸಂ ವಿಭಾಗ ಎಂಪಿ ಎಂ ಕಾಲೇಜು ಕಾರ್ಕಳ
ಮಾಳ: ಕರಾವಳಿಯ ಜನಪದ ಕ್ರೀಡೆ ಕಂಬಳ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಕ್ರೀಡೆ ಕಾಣಸಿಗುತ್ತದೆ. ಕಂಬಳ ತುಳುನಾಡಿನ ಗರಿಮೇ ಸಂಸ್ಕೃತಿಯ ಭಾಗವಾಗಿದೆ ಅದರಲ್ಲಿ ಮಾಳ ಗ್ರಾಮದ ಆನಂದ ನಿಲಯದ ಕೋಣಗಳು ಸಾಧನೆಗಳನ್ನು ಮಾಡಿ ತಮ್ಮ ಊರಿಗೆ ಹೆಸರನ್ನು ತಂದು ಕೊಟ್ಟಿದೆ. ಮಾಳ ಶೇಖರ ಶೆಟ್ಟಿ ಅವರ ಸಹೊದರರು ಕಂಬಳಕ್ಕೆ ಹೆಚ್ಚಿನ ಮಗತ್ವ ನೀಡುತ್ತಾರೆ. ಅವರ ಕೋಣಗಳು ಕಂಬಳ ಕ್ಷೇತ್ರಕ್ಕೆ 2008ರಲ್ಲಿ ಪಾದಾರ್ಪಣೆ ಮಾಡಿದವು. . ಇವರ ತಂದೆಗೆ ತಾಯಿಗೆ ಕಂಬಳದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು .ಸತತ 21 ವರ್ಷಗಳ ಕಾಲ ಕಂಬಳ ಕ್ಷೇತ್ರದಲ್ಲಿ ತಮ್ಮ ಚಾಪನ್ನು ಮೂಡಿಸಿದ್ದಾರೆ.
ಪ್ರಶಸ್ತಿ ಗಳಸರಮಾಲೆ: ಮೊಟ್ಟ ಮೊದಲ ಬಾರಿಗೆ 11 ಮೆಡಲ್ಗಳನ್ನು ಪಡೆದ ಕೀರ್ತಿ ಮಾಳದ ಅನಂದ ನಿಲಯದ ಕೋಣಗಳಿಗೆ ಸಲ್ಲುತ್ತದೆ. ಈ ಸಾಧನೆಯು ಇತಿಹಾಸದಲ್ಲಿ ಸತತ ಮೂರು ವರ್ಷ ಕೂಡ ಈ ಕೋಣಗಳ ಪಾಲಾಗಿರುವುದು ವಿಶೇಷ. ಬೆಂಗಳೂರುನಲ್ಲಿ ನಡೆದ ಕಂಬಳ ಕ್ಷೇತ್ರದಲ್ಲಿದಲ್ಲಿ ಎರಡು ಪ್ರಶಸ್ತಿ ಮುಡಿ ಗೇರಿಸಿಕೊಂಡಿದ್ದು ಬೆಂಗಳೂರಿನಲ್ಲಿ ಜನಮನ್ನಣೆ ಗಳಿಸಿತು. ಒಟ್ಟಿಗೆ 55 ಕ್ಕಿಂತ ಹೆಚ್ಚಿನ ಪ್ರಶಸ್ತಿ ಪದಕ ಮತ್ತು ಹಾಗೂ ಸನ್ಮಾನಗಳು ದೊರೆಕಿವೆ.
ಕೋಣಗಳ ಹಾರೈಕೆ :: ಕಂಬಳಕ್ಕೆ ಎರಡು ದಿನ ಮುನ್ನ ಬಿಸಿ ನೀರಿನಲ್ಲಿ ಸ್ಥಾನವನ್ನು ಮಾಡಿಸಿ ಎಣ್ಣೆಯಲ್ಲಿ ಮಾ ಮಾಡುತ್ತಾರೆ. ಮತ್ತು ಕೆರೆಯಲ್ಲಿ ಈಜಡಲು ಬಿಡುತ್ತಾರೆ. ನಂತರ ಇವುಗಳಿಗೆ ತಿನ್ನಲು ಉರುಳಿಯನ್ನು ಹಾಕುತ್ತಾರೆ 11.30 ತನಕ ಬಿಸಿಲಿಗೆ ಬಿಡುವುದು. ಹಾಗೆಯೇ ವಾರದಲ್ಲಿ ಮೂರು ದಿನ ಒಂದು ಗಂಟೆ ವ್ಯಾಯಾಮ ಮಾಡಿಸುವುದು. ಕಂಬಳದಿಂದ ಬಂದ ನಂತರ ಅವುಗಳಿಗೆ ಕುಡಿಯಲು ಶುದ್ಧವಾದ ಎಳ್ಳೆಣ್ಣೆಯನ್ನು ನೀಡುತ್ತಾರೆ. ಹಾಗೆಯೇ ಕಂಬಳ ಮುಗಿದ ನಂತರ ಹೆಚ್ಚಿನ ತಂಪನ್ನು ಮಾಡುವುದು. ಕುಂಬಳಕಾಯಿ ಕ್ಯಾರೆಟ್ ತಂಪಾದ ವಸ್ತುಗಳನ್ನು ನೀಡುವುದು. ಹಾರೈಕೆಗಳನ್ನು ಮಾಡಲಾಗುತ್ತದೆ. ಕೋನಗಳನ್ನು ಮಕ್ಕಳ ಹಾಗೆ ನೋಡಿಕೊಳ್ಳುತ್ತಾರೆ. ಅದನ್ನು ಆರೈಕೆ ಮಾಡಲು ಕೆಲಸದವರನ್ನು ನೇಮಿಸಿದರೆ.
ವ್ಯವಸ್ಥೆ:: ಈಜುಕೊಳಗಳು ಹಾಗೆಯೇ ಅವುಗಳಿಗೆ ಬೇಕಾದ ವ್ಯವಸ್ಥೆ ಇದೆ. ಕೋಣಗಳು ಒಟ್ಟಿಗೆ ಆರು ಅವುಗಳ ಹೆಸರು ಮುನ್ನೇ, ರಾಟೆ, ಮೂಡೆ,ಸೂಮು ಮಿನಿ ತಾಟೆ, ಈಗ ಅಲ್ಲಿ ಕೋಣವನ್ನು ಓಡಿಸಲು ನುರಿತ ಓಟಗಾರರು ಇದ್ದಾರೆ. ಶಂಕರ್ ಮತ್ತು ಪಟ್ಟೆ ಗುರು ಚರಣ್ ಈ ಬಾರಿ ಕೋಣಗಳನ್ನು ಓಡಿಸಿದ್ದರು..
ಮೊದಲು ಪದಕ ಪಡೆದಾಗಿನ ಖುಷಿ ಹಾಗೂ ಪ್ರತಿ ಕಂಬಳದಲ್ಲಿಯು ಫೈನಲ್ ಎಂಟ್ರಿ ಕೊಟ್ಟಾಗ ಸಿಗುವ ಖುಷಿಯ ಬೇರೊಂದಿಲ್ಲ . ನಮ್ಮ ಕಂಬಳ ನಮ್ಮ ಹೆಮ್ಮೆ ಎನ್ನುತ್ತಾರೆ ಶೇಖರ್ ಶೆಟ್ಟಿ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.