



ಸಿಯೋಲ್: ಉತ್ತರ ಕೊರಿಯಾವು ವಿಶ್ವದ ದೊಡ್ಡಣ್ಣ ಅಮೆರಿಕದ B-1B ಬಾಂಬರ್ ಗೆ ಪ್ರತಿಯಾಗಿ ಎರಡು ಅಲ್ಪ ಶ್ರೇಣಿಯ ಖಂಡಾಂತರ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಸೆಡ್ಡು ಹೊಡೆದಿದೆ.
ದಕ್ಷಿಣ ಕೊರಿಯಾದೊಂದಿಗಿನ ಜಂಟಿ ಸಮರಾಭ್ಯಾಸದ ಭಾಗವಾಗಿ ಅಮೆರಿಕವು B – 1B ಬಾಂಬರ್ ಯುದ್ಧ ವಿಮಾನವನ್ನು ವಾಯು ಸಮರಾಭ್ಯಾಸದಲ್ಲಿ ತೊಡಗಿಸಿದ್ದಕ್ಕೆ ಪ್ರತಿಯಾಗಿ ಉತ್ತರ ಕೊರಿಯಾ ಈ ಕ್ಷಿಪಣಿಗಳನ್ನು ಉಡಾಯಿಸಿದೆ.
ದಕ್ಷಿಣ ಕೊರಿಯಾದ ಗಡಿಯ ಪ್ರಮುಖ ಕಮಾಂಡ್ ಕೇಂದ್ರಗಳು ಮತ್ತು ಕಾರ್ಯಾಚರಣೆಯ ವಾಯುನೆಲೆಗಳಲ್ಲಿ ಪರಮಾಣುತಂತ್ರದ ತಾಲೀಮಿನ ಭಾಗವಾಗಿ ಬುಧವಾರ ತಡರಾತ್ರಿ ಕ್ಷಿಪಣಿಗಳನ್ನು ಹಾರಿಸಲಾಯಿತು ಎಂದು ಉತ್ತರ ಕೊರಿಯಾದ ಸೇನೆಯು ಹೇಳಿದೆ.
ಖಂಡಾಂತರ ಕ್ಷಿಪಣಿಗಳನ್ನು ಪ್ರೋಂಗ್ಯಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈಶಾನ್ಯಕ್ಕೆ ಹಾರಿಸಲಾಯಿತು, ಕ್ಷಿಪಣಿಗಳು ತಮ್ಮ ಉದ್ದೇಶಿತ ಗಮ್ಯಕ್ಕೆ ತಲುಪಿವೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.