logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಟ್ರೆಂಡಿಂಗ್
share whatsappshare facebookshare telegram
14 Mar 2023
post image

ಪೆರ್ಡೂರು: ಶ್ರೀ ಕ್ಷೇತ್ರ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಮಾ.13 ರಿಂದ 20ರ ವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.

ಮಾ.14 ಮಂಗಳವಾರ ಬೆಳಿಗ್ಗೆ ಧ್ವಜಾರೋಹಣ, ಅಗ್ನಿಜನನ, ಪ್ರಧಾನಹೋಮ, ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ಅನ್ನಸಂತರ್ಪಣೆಯ ಸೇವಾಕರ್ತರು: ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ರಾತ್ರಿ ದೀವಟಿಕೆ ಸೇವೆ, ಉತ್ಸವಬಲಿ, ಪನ್ನಗೋತ್ಸವ, ಶೇಷ ವಾಹನ, ಓಲಗಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆಗಳು, ಮಹಾಪೂಜೆ, ನಿತ್ಯಬಲಿ, ಸವಾರಿ ಬಲಿ, ಕಟ್ಟೆ ಪೂಜೆ, ಆರಾಧನಾ ಬಲಿ

ಮಾ.15 ಬುಧವಾರ ಮಧ್ಯಾಹ್ನ ಪ್ರಧಾನಹೋಮ, ಕಲಶಾಭಿಷೇಕ, ಮಹಾಪೂಜೆ, ಮೀನ ಸಂಕ್ರಮಣ ಅನ್ನ ಸಂತರ್ಪಣೆ ಅನ್ನ ಸಂತರ್ಪಣೆಯ ಸೇವಾಕರ್ತರು: ಶ್ರೀ ಸದಾನಂದ ಸೇರ್ವೆಗಾರ್ ಉದ್ಯಮಿ, ಬೆಂಗಳೂರು (ಶ್ರೀ ದೇವಳದಲ್ಲಿ ನಡೆಯುತ್ತಿರುವ ನಿತ್ಯ ಅನ್ನ ಸಂತರ್ಪಣೆಗೆ ಶಾಶ್ವತ ಅಕ್ಕಿ ಸೇವೆ ನೀಡುತ್ತಿರುವವರು) ರಾತ್ರಿ ದೀವಟಿಕೆ ಸೇವೆ, ಉತ್ಸವಬಲಿ, ಗರುಡವಾಹನ, ತೆಪ್ಪೋತ್ಸವ, ರಥೋತ್ಸವ, ಓಲಗಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆಗಳು, ಮಹಾಪೂಜೆ, ನಿತ್ಯಬಲಿ, ಸವಾರಿ ಬಲಿ, ಕಟ್ಟೆಪೂಜೆ, ಕಂಚಿನ ಸೇವೆ, ಡೊಡ್ಡರಂಗಪೂಜೆ, ರಂಗಪೂಜೆ,ಕೆರೆದೀಪ, ಚಂದ್ರಮಂಡಲ ರಥ, ಉಷಃಕಾಲ ಪೂಜೆ, ಕಂಚಿನ ಪ್ರಸಾದ ವಿತರಣೆ.

ಮಾ.16 ಗುರುವಾರ ಬೆಳಿಗ್ಗೆ ಪ್ರಧಾನಹೋಮ, ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ಅನ್ನ ಸಂತರ್ಪಣೆಯ ಸೇವಾಕರ್ತರು: ದಿ| ಧರ್ನಮ್ಮ ಓಬಯ್ಯ ಹೆಗ್ಡೆಯವರ ಮಕ್ಕಳು, ಪೆರ್ಡೂರು ರಾತ್ರಿ ದೀವಟಿಕೆ ಸೇವೆ, ಉತ್ಸವಬಲಿ, ವಸಂತೋತ್ಸವ, ಬೆಳ್ಳಿ ಪಾಲಕಿ, ಚಂದ್ರಮಂಡಲ ರಥ, ಇಡಿಗಾಯಿ, ಓಲಗಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆಗಳು, ಮಹಾಪೂಜೆ, ನಿತ್ಯಬಲಿ, ಸವಾರಿ ಬಲಿ, ಕಟ್ಟೆಪೂಜೆ, ಭುಜಂಗ ಬಲಿ
ಮಾ.17 ಶುಕ್ರವಾರ ಬೆಳಗ್ಗೆ ಪ್ರಧಾನಹೋಮ, ಕಲಶಾಭಿಷೇಕ, ರಥಹೋಮ, ರಥಸಂಪ್ರೋಕ್ಷಣೆ, ಕೊಡಿಪೂಜೆ, ಮಹಾಪೂಜೆ ಪೂರ್ವಾಹ್ನ 11.30ಕ್ಕೆ ರಥಾರೋಹಣ ಮಧ್ಯಾಹ್ನ ಅನ್ನ ಸಂತರ್ಪಣೆ ಅನ್ನ ಸಂತರ್ಪಣೆಯ ಸೇವಾಕರ್ತರು: ಶಾಂಭವಿ ಶಿವಪ್ಪ ಹೆಗ್ಡೆ ಮತ್ತು ಮಕ್ಕಳು, ಕುದುಮುಂಜೆ, ಪೆರ್ಡೂರು ಸಂಜೆ 6.00 ಕ್ಕೆ ಶ್ರೀ ಮನ್ಮಹಾರಥೋತ್ಸವ ರಾತ್ರಿ ದೀವಟಿಕೆ ಸೇವೆ, ನರ್ತನ, ವಾದ್ಯ ಸೇವಾದಿಗಳು, ಹಚ್ಚಡ ಸೇವೆ, ರಥಾವರೋಹಣ, ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ, ಓಲಗಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆಗಳು, ಮಹಾಪೂಜೆ, ಶ್ರೀ ಭೂತಬಲಿ, ಕವಾಟಬಂಧನ, ಶಯನೋಲಗ
ಮಾ.18 ಶನಿವಾರ ಬೆಳಿಗ್ಗೆ ಮಖಾಧಾನ, ಕವಾಟೋದ್ಘಾಟನೆ, ಅಷ್ಟಾವಧಾನ ಸೇವೆಗಳು, ಅಂಕುರಪ್ರಸಾದ ವಿತರಣೆ, ಭಕ್ತರ ತುಲಾಭಾರಾದಿ ಸೇವೆಗಳು, ಕೊಡಿನೀರು, ಪ್ರಧಾನಹೋಮ, ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ, ಏಕಾದಶಿ ಉಪಾಹಾರ ಉಪಾಹಾರ ಸೇವಾಕರ್ತರು: ಪೆರ್ಡೂರು ಕುಕ್ಕುಂಜಾರು ಕುಟುಂಬಸ್ಥರು ರಾತ್ರಿ ದೀವಟಿಕೆ ಸೇವೆ, ಓಲಗಮಂಟಪದಲ್ಲಿ ಪೂಜೆ, ಓಕುಳಿ, ತೀರ್ಥಯಾತ್ರಾ ಬಲಿ, ಅವಭೃತ, ಆರಾಟೋತ್ಸವ, ಸೂಟೆದಾರೆ, ರಾಜಬೀದಿ ಪಲ್ಲಕ್ಕಿ ಉತ್ಸವ, ಪೂರ್ಣಾಹುತಿ, ಮಂತ್ರಾಕ್ಷತೆ, ಧ್ವಜಾವರೋಹಣ, ಮಹಾಪೂಜೆ, ನಿತ್ಯ ಬಲಿ, ಡೊಡ್ಡರಂಗಪೂಜೆ, ರಂಗಪೂಜೆ ಚಂದ್ರಮಂಡಲ ರಥ
ಮಾ.19 ರವಿವಾರ ಬೆಳಿಗ್ಗೆ ಪುಣ್ಯಾಹವಾಚನ, ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಅನ್ನ ಸಂತರ್ಪಣೆಯ ಸೇವಾಕರ್ತರು : ಡೊಡ್ಮನೆ ಕುಟುಂಬಸ್ಥರು, ಪೆರ್ಡೂರು ರಾತ್ರಿ ದೀವಟಿಕೆ ಸೇವೆ, ಉತ್ಸವ ಬಲಿ, ಪಲ್ಲಕ್ಕಿ ಉತ್ಸವ, ಚಂದ್ರಮಂಡಲ ರಥ, ಓಲಗಮಂಟಪದಲ್ಲಿ ಪೂಜೆ, ಓಕುಳಿಯಾಟ, ಮಹಾಪೂಜೆ, ನಿತ್ಯಬಲಿ
ಮಾ.20 ಸೋಮವಾರ ಬೆಳಿಗ್ಗೆ ಮಹಾಸಂಪ್ರೋಕ್ಷಣೆ, ಗಣಹೋಮ, ಬ್ರಹ್ಮಕುಂಭಾಭಿಷೇಕ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಸಂಜೆ ಮಹಾಮಂತ್ರಾಕ್ಷತೆ ರಾತ್ರಿ ಮಹಾಪೂಜೆ, ನಿತ್ಯಬಲಿ, ಪರಿವಾರ ದೈವಗಳ ಪೂಜೆ, ಬಲಿ ನಡೆಯಲಿದೆ.
ಭಕ್ತಾದಿಗಳೆಲ್ಲರೂ ಈ ಕಾರ್ಯಕ್ರಮಗಳಿಗೆ ಆಗಮಿಸಿ, ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ, ಭಗವದನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೀವೆ ಎಂದು ಮಹೇಶ್ ಕುಮಾರ್ ಶೆಟ್ಟಿ ಪೈಬೆಟ್ಟು ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಕೆ. ರಾಜಗೋಪಾಲ ಉಪಾಧ್ಯಾಯ ಕಾರ್ಯನಿರ್ವಹಣಾಧಿಕಾರಿ, ಪಿ. ಸುಧಾಕರ ಅಡಿಗ ಅರ್ಚಕರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಲ| ದಿವಾಕರ್ ಶೆಟ್ಟಿ ಜ್ಯೋತಿ ಫಾರ್ಮ್, ಜೋಗಿಬೆಟ್ಟು, ಎಸ್. ಜಿಯಾನಂದ ಹೆಗ್ಡೆ ಬೈರಂಪಳ್ಳಿ, ಶಂಕರ ನಾಯ್ಕ್ ಮೂಡುಜಡ್ಡು, ನಾಗಲಕ್ಷ್ಮೀ ತುಕಾರಾಮ ನಾಯಕ್ ಪೆರ್ಡೂರು, ಜಯ ಪೂಜಾರಿ ಆಂತುಬೆಟ್ಟು, ಡಾ|ವಿದ್ಯಾಧರ ಶೆಟ್ಟಿ ಹೆರ್ಡೆಬೀಡು, ವನಿತಾ ಕುಲಾಲ್ ಪಠಾಳಿಮನೆ ಹಾಗೂ ಸಿಬ್ಬಂದಿ ವರ್ಗ, ಶ್ರೀ ಅನಂತಪದ್ಮನಾಭ ದೇವಸ್ಥಾನ, ಪೆರ್ಡೂರು ಪ್ರಕಟಣೆ ತಿಳಿಸಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.