logo
WhatsApp Image 2026-04-02 at 14.46.04.jpeg
hindalco everlast.jpeg

ಹಮಾಸ್‌ ಸಂಘಟನೆಯ ಮತ್ತೊಬ್ಬ ಮಾಸ್ಟರ್‌ ಮೈಂಡ್‌ ಹತ್ಯೆ

ಟ್ರೆಂಡಿಂಗ್
share whatsappshare facebookshare telegram
28 Oct 2023
post image

ಟೆಲ್ ಅವಿವ್: ಭಯೋತ್ಪಾದಕ ಸಂಘಟನೆ ಹಮಾಸ್‌ನ ವೈಮಾನಿಕ ಕಾರ್ಯಾಚರಣೆಗಳ ಮುಖ್ಯಸ್ಥನನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಶನಿವಾರ ಹೇಳಿದೆ. ಹಮಾಸ್ ವೈಮಾನಿಕ ಕಾರ್ಯಾಚರಣೆಗಳ ಮುಖ್ಯಸ್ಥ ಅಬು ರುಕ್ಬೆ ಭಯೋತ್ಪಾದಕ ಸಂಘಟನೆಯ ಡ್ರೋನ್ ಕಾರ್ಯಾಚರಣೆಗಳು, ವೈಮಾನಿಕ ಪತ್ತೆ ವ್ಯವಸ್ಥೆಗಳು ಮತ್ತು ಹ್ಯಾಂಡ್ ಗ್ಲೈಡರ್‌ಗಳ ಮುಖ್ಯಸ್ಥನಾಗಿದ್ದ ಎಂದು ಐಡಿಎಫ್ ಮತ್ತು ಶಿನ್ ಬೆಟ್ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ಹಮಾಸ್ ಭಯೋತ್ಪಾದಕರ ಗುಂಪುಗಳು ಇಸ್ರೇಲ್ ನೆಲದಲ್ಲಿ ಉಗ್ರ ಕೃತ್ಯ ನಡೆಸಲು ಅಬು ರುಕ್ಬೆ ಮಾಸ್ಟರ್‌ ಮೈಂಡ್‌ ಎಂದು ಇಸ್ರೇಲ್‌ ಹೇಳಿದೆ. ಇಸ್ರೇಲಿ ನೆಲದಲ್ಲಿ ನಡೆದ ಭಯೋತ್ಪಾದನಾ ದಾಳಿಯ ಯೋಜನೆಗೆ ಕಾರಣರಾದ ಎಲ್ಲರನ್ನು ಇಸ್ರೇಲಿ ಪಡೆಗಳು ಬೇಟೆಯಾಡಲಿವೆ ಎಂದು ಇಸ್ರೇಲ್ ಸ್ಪೈ ಏಜೆನ್ಸಿ ಮೊಸಾದ್‌ನ ಮೇಜರ್ ಜನರಲ್ (ನಿವೃತ್ತ) ಯೈರ್ ರವೀದ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.