logo
WhatsApp Image 2026-04-02 at 14.46.04.jpeg
hindalco everlast.jpeg

ಅಂತರರಾಷ್ಟ್ರೀಯ ಯೋಗಾಸನಾ ಸ್ಪರ್ಧೆಗೆ ಕಾರ್ಕಳದ ಅನ್ವಿ ಎಚ್ ಅಂಚನ್.

ಟ್ರೆಂಡಿಂಗ್
share whatsappshare facebookshare telegram
20 Apr 2022
post image

ಇ0ಟರ್ ನ್ಯಾಷನಲ್ ಯೂತ್ ಯೋಗಿಕ್ ಸೈನ್ಸ್, ವರ್ಷಿಣಿ ಯೋಗ ಎಜುಕೇಷನ್ ಮತ್ತು ಆಯುಷ್ ಆಂಡ್ ಯೂತ್ ಸ್ಪೋಟ್ಸ್ ಸರ್ವಿಸ್ ಸಹಯೋಗದೊಂದಿಗೆ ಏಪ್ರಿಲ್ ೧೪ ರಿಂದ ೧೭ ರ ವರೆಗೆ ಗೋವಾಧ ಕಘಾಟ್ ನಲ್ಲಿ ನಡೆದ ೮ ನೇ ರಾಷ್ಟç ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ ೨೦೨೧-೨೨ ರಲ್ಲಿ ಕಾರ್ಕಳದ ಅನ್ವಿ ಎಚ್ ಅಂಚನ್ ರವರು ಭಾಗವಹಿಸಿ ೧೧ ರಿಂದ ೧೫ ನೇ ವರ್ಷದ ವಯೋಮಾನದ ಯೋಗಾಸನ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಅಂತರಾಷ್ಟೀಯ ಯೋಗಾಸನಾ ಸ್ಪರ್ಧೆಗೆ ಆಯ್ಕೆ ಆಗಿರುತ್ತಾಳೆ. ಅನ್ವಿ ಹೆಚ್ ಅಂಚನ್ ರವರು ಈ ಹಿಂದೆಯು ಹಲವು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತಳಾಗಿದ್ದು ೨೦೨೦-೨೧ ನೇ ಸಾಲಿನಲ್ಲಿ ಮಲೇಷಿಯಾ ಸರ್ಕಾರ ನಡೆಸಿದ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯ ಅರ್ಟಿಸ್ಟಿಕ್ ಸೋಲೋ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾಳೆ. ಇದೀಗ ಜೂನ್ ಕೊನೆಯ ವಾರ ಥೈಲಾಂಡ್ ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆ ಮೂಲಕ ಉತ್ತಮ ಸಾಧನೆ ಮಾಡಿರುತ್ತಾಳೆ. ಇವಳು ನಿರಂತರ ಯೋಗ ಶಿಕ್ಷಣ ಕೇಂದ್ರ ಕಾರ್ಕಳ ಇದರ ವಿದ್ಯಾರ್ಥಿನಿಯಾಗಿದ್ದು ಅಂತರಾಷ್ಟಿçÃಯ ಪ್ರಶಸ್ತಿ ವಿಜೇತ ಯೋಗ ಗುರು ಶ್ರೀ ನರೇಂದ್ರ ಕಾಮತ್ ರವರ ಮಾರ್ಗದರ್ಶನದಲ್ಲಿ ಯೋಗ ಶಿಕ್ಷಕ ಆಶೋಕ್ ರಾವ್ ಜೋಡುರಸ್ತೆ ಇವರಲ್ಲಿ ಯೋಗ ಶಿಕ್ಷಣ ಪಡೆದಿರುತ್ತಾಳೆ. ಯೋಗಾಸನದ ವಿವಿಧ ವಿಭಾಗಗಳಲ್ಲಿ ವಿಶ್ವ ದಾಖಲೆ ಮಾಡಿರುವ ಅನ್ವಿ ಹೆಚ್ ಅಂಚನ್ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ ಶಾಲೆಯ ವಿಧ್ಯಾರ್ಥಿನಿಯಾಗಿದ್ದು ಸರಕಾರಿ ಪ್ರೌಢಶಾಲೆ ಮಾಳ ಚೌಕಿಯಂಗಡಿ ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಶೋಭಾ ಹಾಗೂ ಹರೀಶ್ ಅಂಚನ್ ರವರ ಪುತ್ರಿಯಾಗಿರುತ್ತಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.