



ಕಾರ್ಕಳ ಮೆಸ್ಕಾಂ ಕಚೇರಿ ಬಳಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದ್ದು ಸೂಕ್ತ ಕ್ರಮ ಜರುಗಿಸುವಂತೆ ಕಾರ್ಕಳ ತಹಶಿಲ್ದಾರರಿಗೆ ಪುರಸಭಾ ಸದಸ್ಯರು ಮನವಿ ಸಲ್ಲಿಸಿದರು. 2020 ರಲ್ಲಿ ನಡೆದ ಪುರಸಭೆಯ ಮಾಸಿಕ ಸಭೆಯ ನಿರ್ಣಯದಲ್ಲಿ ಜೈನ್ ಹೋಟೆಲ್ ಮುಂಬಾಗದಲ್ಲಿ ನಂದಿನ ಹಾಲಿನ ಡೈರಿ ನಿರ್ಮಾಣಕ್ಕೆ ಸ್ಥಳಿಯ ಪುರಸಭಾ ಸದಸ್ಯರ ವಿರೋಧದ ನಡುವೆಯೂ ಒಪ್ಪಿಗೆ ನೀಡಲಾಗಿದ್ದು ಆದರೆ ಈಗ ಅದನ್ನು ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿರುವ ಮಕ್ಕಳ ಪಾರ್ಕ್ ಬಳಿ ನಿರ್ಮಾಣ ಮಾಡುತ್ತಿದ್ದು ಲೋಕೋಪಯೋಗಿ ಇಲಾಖೆಯ ರಸ್ತೆ ಮಾರ್ಜಿನ ವ್ಯಾಪ್ತಿಯ ಒಳಗೆ ಬರುತ್ತಿದ್ದು ಇದಕ್ಕೆ ಲೋಕೋಪಯೋಗಿ ಇಲಾಖೆಯ ನಿರಾಕ್ಷೇಪಣ ಪತ್ರದ ಅಗತ್ಯವಿದೆ ಆದರೆ ಇದಾವುದು ಇಲ್ಲದೆ ಕಟ್ಡದ ನಿರ್ಮಾಣವಾಗುತ್ತಿದ್ದು ಸೂಕ್ತ ಕ್ರಮ ಜರುಗಿಸುವಂತೆ ಸ್ಥಳೀಯ ಪುರಸಭಾ ಸದಸ್ಯರಾದ ಪ್ರಭಾ ಕಿಶೋರ್ ಮನವಿ ಸಲ್ಲಿಸಿದರು ಈ ಸಂಬಂಧದಲ್ಲಿ ಪುರಸಭಾ ಸದಸ್ಯರಾದ ಶುಭದರಾವ್, ಸೀತಾರಾಮ್, ಪ್ರತಿಮಾ, ವಿನ್ನಿಬೋಲ್ಡ್ ಮೆಂಡೋನ್ಸಾ, ಅಜಿತ್ ಹೆಗ್ಡೆ ಮಾಳ ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.