



ಬೆಂಗಳೂರು: ಕೋವಿಡ್ ನಿಂದ ಬ್ಲ್ಯಾಕ್ ಫಂಗಸ್ ಕಾಯಿಲೆಗಳು ಹೈರಾಣವಾಗಿಸಿದ್ದು, ಈ ಸಂದರ್ಭದಲ್ಲಿಯೇ ಗುಣಮುಖರಾಗಿರುವ ಜನರಲ್ಲಿ ಟಿಬಿ ಕಾಣಿಸಿಕೊಂಡಿದ್ದು ಜನರು ಚಿಂತಾಕ್ರಾಂತರಾಗಿದ್ದಾರೆ . ಕರ್ನಾಟಕದಲ್ಲಿ ಒಂದು ತಿಂಗಳ ಕಾಲ ಕ್ಷಯರೋಗ ಸಮೀಕ್ಷೆ ನಡೆದಿದ್ದು, ಒಟ್ಟಾರೆ 225 ಜನರು ಟಿಬಿಯಿಂದ ಬಳಲುತ್ತಿದ್ದಾರೆ. ಟಿ.ಬಿ ಕಾಣಿಸಿಕೊಂಡ ಜನರಲ್ಲಿ 6 ತಿಂಗಳಿನಿಂದ ಇತ್ತೀಚೆಗೆ ಕೊರೋನ ಕಾಣಿಸಿಕೊಂಡಿತ್ತು. ಆ.16ರಿಂದ ಸೆ.11 ರವರೆಗೆ ಮನೆ ಮನೆ ಸಮೀಕ್ಷೆ ನಡೆದಿದ್ದು, ಒಟ್ಟು7,66,137 ಜನರ ಪರೀಕ್ಷೆ ಮಾಡಲಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಉತ್ತರ ಕರ್ನಾಟಕ ಕಲಬುರಗಿ, ಬಳ್ಳಾರಿ, ಚಿತ್ರದುರ್ಗ, ಮೈಸೂರು, ಬೆಂಗಳೂರು ಹಾಗೂ ಕೊಪ್ಪಳದಲ್ಲಿ ಟಿಬಿ ಪ್ರಕರಣಗಳು ವರದಿಯಾಗಿವೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.