



Indbank Recruitment 2023 : ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ ಒಂದಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ (Bank Job) ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಂಡ್ಬ್ಯಾಂಕ್ ಮರ್ಚೆಂಟ್ ಬ್ಯಾಂಕಿಂಗ್ ಸರ್ವೀಸಸ್ ಲಿಮಿಟೆಡ್ ನಲ್ಲಿ (Indbank Merchant Banking Services Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಒಟ್ಟು 12 ಡೀಲರ್ (Dealer) ಹುದ್ದೆಗಳು ಖಾಲಿ ಇದೆ.
Indbank Recruitment 2023 ಹುದ್ದೆಯ ಕುರಿತು ಮಾಹಿತಿ ಇಂತಿವೆ : ಸಂಸ್ಥೆ : ಇಂಡ್ ಬ್ಯಾಂಕ್ ಹುದ್ದೆ : ಡೀಲರ್ ಒಟ್ಟು ಹುದ್ದೆ : 12 ವೇತನ : 3.50 ಲಕ್ಷ ಅರ್ಜಿ ಸಲ್ಲಿಸಲು ಕೊನೆಯ ದಿನ : ಏಪ್ರಿಲ್ 22, 2023 ವಯೋಮಿತಿ : ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.
ಉದ್ಯೋಗದ ಸ್ಥಳ : ಕೊಲ್ಕತ್ತಾ, ವಾರಣಾಸಿ, ಕಾನ್ಪುರ, ಭುವನೇಶ್ವರ, ಜೈಪುರ, ಚಂಡೀಗಢ, ಇಂದೋರ್, ಸೂರತ್, ಲಕ್ನೋ, ಪುಣೆ, ಸಿಕಂದರಾಬಾದ್, ಪಂಜಾಬಿ ಬಾಘ್.
ವಿದ್ಯಾರ್ಹತೆ : ಅಭ್ಯರ್ಥಿಗಳು ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು. NISM / NCFM ವಿದ್ಯಾರ್ಹತೆ ಪಡೆದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷ ಅನುಭವ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ : ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ : ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು. 480, 1ನೇ ಮಹಡಿ ಖಿವರಾಜ್ ಕಾಂಪ್ಲೆಕ್ಸ್ 1 ಅಣ್ಣಾ ಸಲೈ ನಂದನಂ ಚೆನ್ನೈ – 600035
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈ ಮೇಲಿನ ನಿಯಮನುಸಾರ ಏಪ್ರಿಲ್ 22, 2023 ಮೊದಲು ಅರ್ಜಿ ಸಲ್ಲಿಸಬಹುದಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.