



ಉಡುಪಿ,:ಉಡುಪಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನಾದ ಎನ್. ಪಿ-ಎನ್.ಸಿ.ಡಿ, ಎಂ.ಪಿ.ಎಚ್.ಸಿ.ಇ, ಎನ್ ಪಿ ಸಿ ಕಾರ್ಯಕ್ರಮದಡಿ ಜಿಲ್ಲಾ ಆಸ್ಪತ್ರೆ ಉಡುಪಿಯಲ್ಲಿ ಖಾಲಿ ಇರುವ ಒಟ್ಟು 6 ತಜ್ಞರು ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು 1 ಎಂ ಡಿ ಕಾರ್ಡಯಾಲಜಿ ಅಥವಾ ಫಿಜಿಷಿಯನ್, 3ಎಂ.ಡಿ ಫಿಜಿಷಿಯನ್,02 ಎಂ ಡಿ ಫಿಜಿಶಿಯನ್ ಅಥವಾ ಎಂ.ಡಿ ಅನಸ್ತೇಶಿಯ ಅಥವಾ ಎಂ ಡಿ ರೇಡಿಯೋ ಥೆರಪಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವೇತನ ವೇತನ 1.10 ಲಕ್ಷ ರೂಪಾಯಿ. ಆಸಕ್ತ ಅಭ್ಯರ್ಥಿಗಳು ಸೆ.20 ರಂದು ಬೆಳಗ್ಗೆ 10:30 ರಿಂದ 1 ಗಂಟೆವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಉಡುಪಿ ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಶೈಕ್ಷಣಿಕ ಮೂಲ ದಾಖಲಾತಿಗಳೊಂದಿಗೆ ಹಾಜರಾಗುವುದು ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.